Home News Udupi: ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿ ಕೃಷ್ಣಮಠದಲ್ಲಿ ಭರದ ಸಿದ್ಧತೆ

Udupi: ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿ ಕೃಷ್ಣಮಠದಲ್ಲಿ ಭರದ ಸಿದ್ಧತೆ

Hindu neighbor gifts plot of land

Hindu neighbour gifts land to Muslim journalist

Udupi: ಶ್ರೀಕೃಷ್ಣ ಮಠ ಜನ್ಮಾಷ್ಠಮಿ ಸಂಭ್ರಮಕ್ಕೆ ಕೃಷ್ಣನಗರಿ ಸಿದ್ಧಗೊಳ್ಳುತ್ತಿದೆ. ಉಡುಪಿಯ ಪ್ರಮುಖ ಆಕರ್ಷಣೆಯಾಗಿರುವ ಅಷ್ಟಮಿ ಈ ತಿಂಗಳ 14 ಮತ್ತು 15 ರಂದು ನಡೆಯಲಿದೆ. ಹೀಗಾಗಿ ಮಠದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

ಈ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಗ್ರಾಮೀಣ ಕ್ರೀಡೆಗಳನ್ನು ಮಠದಲ್ಲಿ ಆಯೋಜಿಸಲಾಗಿತ್ತು. ಮಹಿಳೆಯರು, ಪುರುಷರು, ಮಕ್ಕಳು, ವೃದ್ಧರು ಸೇರಿ ಎಲ್ಲರು ಗ್ರಾಮೀಣ ಕ್ರೀಡೆಯಲ್ಲಿ ಭಾಗಿಯಾದರು. ಕಬಡ್ಡಿ, ಲಗೋರಿ ಸೇರಿ ವಿವಿಧ ಗ್ರಾಮೀಣ ಆಟಗಳನ್ನು ಆಡಿದರು.

ಇದನ್ನೂ ಓದಿ:Strong and Shiny Hair: ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು ಇವುಗಳನ್ನು ತಿನ್ನಿರಿ

ಪುತ್ತಿಗೆ ಮಠಾಧೀಶ ಸುಗುಣೇಂದ್ರ ಶ್ರೀಗಳು ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಶಾಸ್ತ್ರೀಯವಾದಂತ ಆಚರಣೆ. ಇದು ಹಬ್ಬ ಮತ್ತು ಸಂಭ್ರಮ ಮಾತ್ರವಲ್ಲ ಇದಕ್ಕೆ ಧರ್ಮಶಾಸ್ತ್ರದಲ್ಲಿ ವಿಶೇಷವಾದ ಮಹತ್ವವಿದೆ. ಇದು ದೊಡ್ಡ ವ್ರತ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ವಿಶೇಷ ವ್ರತಗಳಲ್ಲೂಂದು ಎಂದು ಹೇಳಿದರು.