Home News ಗರ್ಭಿಣಿ ಆಗುವ ಬಯಕೆ ಯುವತಿಯನ್ನು ನವಜಾತ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸುವಂತೆ ಮಾಡಿತು |ಕೊನೆಗೆ ಅದೇ...

ಗರ್ಭಿಣಿ ಆಗುವ ಬಯಕೆ ಯುವತಿಯನ್ನು ನವಜಾತ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸುವಂತೆ ಮಾಡಿತು |ಕೊನೆಗೆ ಅದೇ ಆಸೆಯಿಂದ ಆಕೆ ಚಟ್ಟ ಏರುವಂತಾಯಿತು !!

Hindu neighbor gifts plot of land

Hindu neighbour gifts land to Muslim journalist

ಗರ್ಭಿಣಿಯಾಗಲು ಬಯಸಿದ್ದ ಯುವತಿ ಹಸುಗುಸಿನ ಹೊಕ್ಕಳ ಬಳ್ಳಿ ಸೇವಿಸಿ ಸಾವನ್ನಪ್ಪಿರುವ ಘಟನೆ ಅಮರಾವತಿ ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ.

ದಾಚೆಪಲ್ಲಿ ನಿವಾಸಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ. ತುಬಡು ಗ್ರಾಮದ ರವಿ ಜೊತೆಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದಳು. ಗರ್ಭಿಣಿಯಾಗಲು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದಳು. ಇದಕ್ಕಾಗಿ ನಾಟಿ ಔಷಧಗಳನ್ನೆಲ್ಲಾ ಪಡೆದಿದ್ದರು. ಹಾಗೆಯೇ ಗರ್ಭಿಣಿಯಾಗಲು ಹೊಕ್ಕಳ ಬಳ್ಳಿ ಸೇವಿಸಿ ಆಕೆ ಸಾವನ್ನಪ್ಪಿರುವುದಾಗಿ ಕೆಲ ಸ್ಥಳೀಯರು ಆರೋಪಿಸಿದ್ದಾರೆ.

ಆಕೆ ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, ಕೂಡಲೇ ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಆಕೆ ತಾಯಿ ನಾಂದೆಡ್ಲದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದ್ದು, ನಂತರ ಕ್ರಮ ಕೈಗೊಳ್ಳುವುದಾಗಿ ನಾಂದೆಡ್ಲದ ಸಿಐ ಸತೀಶ್ ತಿಳಿಸಿದ್ದಾರೆ.

ಸ್ತ್ರಿ ರೋಗ ತಜ್ಞೆ ಈ ಕುರಿತಾಗಿ ಮಾತನಾಡಿ, ಗರ್ಭಿಣಿಯಾಗಲು ಹೊಕ್ಕಳು ಬಳ್ಳಿ ಸೇವನೆ ಅವೈಜ್ಞಾನಿಕ. ಈ ಕುರಿತಾಗಿ ಮಹಿಳೆಯರಲ್ಲಿ ಅರಿವಿನ ಕೊರತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ. ನಂಬಿಕೆ ಮತ್ತು ಮೂಢನಂಬಿಕೆ ಪದ್ಧತಿಗಳಲ್ಲಿ ನಂಬಿಕೆ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.