Home Karnataka State Politics Updates ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಚುನಾವಣಾ ಪೂರ್ವ ಭಾವಿ ಸಭೆ : ಅಭ್ಯರ್ಥಿ ಯಾರು...

ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಚುನಾವಣಾ ಪೂರ್ವ ಭಾವಿ ಸಭೆ : ಅಭ್ಯರ್ಥಿ ಯಾರು ?

Hindu neighbor gifts plot of land

Hindu neighbour gifts land to Muslim journalist

Sulya :ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಚುನಾವಣಾ ಪೂರ್ವ ಭಾವಿ ಸಭೆಯು ಸುಳ್ಯ (sulya)ಕ್ಷೇತ್ರ ಉಸ್ತುವಾರಿ ಅಬ್ದುಲ್ ಕಲಾಂ ರವರ ಅಧ್ಯಕ್ಷತೆಯಲ್ಲಿ ಸುಳ್ಯದಲ್ಲಿ ನಡೆಯಿತು.

ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಸ್ಫರ್ದಿಸುವ ವಿಚಾರದ ಬಗ್ಗೆ ಹಾಗೂ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ನಡೆಯಿತು. ವಿಧಾನಸಭಾ ಸಮಿತಿ ಕಡೆಯಿಂದ ಅಂತಿಮ ಎರಡು ಹೆಸರುಗಳನ್ನು ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮೂಲಕ ರಾಜ್ಯ ಸಮಿತಿಗೆ ರವಾನಿಸಲಾಯಿತು.

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಹಾಗೂ ವಿಧಾನಸಭಾ ಸಮಿತಿ ಕಡೆಯಿಂದ ಬಂದ ಎರಡು ಹೆಸರುಗಳನ್ನು ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಸಭೆಯ ವೀಕ್ಷಕರಾಗಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಸುಳ್ಯ ವಿಧಾನಸಭಾ ಕಾರ್ಯದರ್ಶಿ ರಫೀಕ್ ಎಂ.ಎ, ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ,ಸಮಿತಿ ಸದಸ್ಯರಾದ , ಬಶೀರ್ ಆತೂರು, ನೆಬಿ ಶಾನ್ ಕಡಬ,ಮೀರಾಝ್ ಸುಳ್ಯ,ಸಲೀಂ‌ ಸುಳ್ಯ, ಶರೀಫ್ ನಿಂತಿಕಲ್ ಹಮೀದ್ ಮರಕ್ಕಡ,ಅಬ್ದುಲ್ ರಝಾಕ್ ಕೆನರಾ ಸವಣೂರು ಸೇರಿದಂತೆ ಬ್ಲಾಕ್ ಸಮಿತಿ ಹಾಗೂ ಗ್ರಾಮ ಸಮಿತಿಯ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.