Home News Pranab mohantiy: ಧರ್ಮಸ್ಥಳ ಬುರುಡೆ ಪ್ರಕರಣ – SIT ಮುಖ್ಯಸ್ಥರಿಂದ ಸ್ಫೋಟಕ ಹೇಳಿಕೆ!!

Pranab mohantiy: ಧರ್ಮಸ್ಥಳ ಬುರುಡೆ ಪ್ರಕರಣ – SIT ಮುಖ್ಯಸ್ಥರಿಂದ ಸ್ಫೋಟಕ ಹೇಳಿಕೆ!!

Hindu neighbor gifts plot of land

Hindu neighbour gifts land to Muslim journalist

Pranab mohantiy: ಧರ್ಮಸ್ಥಳ ಸುತ್ತಮುತ್ತ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಳಿಕ ಸರ್ಕಾರ ಇದಕ್ಕೆ ಎಸ್ಐಟಿ ರಚನೆ ಮಾಡಿ ತನಿಖೆಯನ್ನು ಕೂಡ ನಡೆಸುತ್ತಿದೆ. ಈಗಾಗಲೇ 3-4 ತಿಂಗಳು ತನಿಖೆ ನಡೆದಿದ್ದು, ತನಿಖೆ ಅಂತಿಮ ಹಂತವನ್ನು ತಲುಪಿದೆ. ಆದರೂ ಪ್ರಕರಣದ ವರದಿ ಸಲ್ಲಿಸೋಕೆ ತಡವಾಗುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯ ಮುಖ್ಯಸ್ಥರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು, ಶ್ರೀಕ್ಷೇತ್ರ ಧರ್ಮಸ್ಥಳ ಕೇಸ್ ತನಿಖೆ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಚಾರ್ಜ್​ ಶೀಟ್​ ಕೂಡ ಸಲ್ಲಿಕೆಯಾಗುತ್ತೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಇದೀಗ ಎಸ್​ಐಟಿ ಮುಖ್ಯಸ್ಥರೇ ತನಿಖೆ ಇನ್ನೂ ಮುಗಿದಿಲ್ಲ. ಚಾರ್ಜ್ ಶೀಟ್ ಸಿದ್ಧಗೊಂಡಿದೆ ಅಂತ ಎಲ್ಲರೂ ಹೇಳಿಕೆ ನೀಡುತ್ತಿದ್ದಾರೆ. ಅದು ಚಾರ್ಜ್ ಶೀಟ್ ಎಂದು ಯಾರು ಹೇಳಿದ್ದು, ಪ್ರಕರಣ ಇನ್ನೂ ಇನ್ನೂ ತನಿಖೆ ಹಂತದಲ್ಲಿದೆ. ತನಿಖೆ ಪೂರ್ಣಗೊಂಡಿಲ್ಲ. ಅರೆಸ್ಟ್ ಮಾಡೋದೇ ತನಿಖೆಯಲ್ಲ. ಈಗ ಸಲ್ಲಿಕೆ ಆಗಿರೋದು ಚಾರ್ಜ್ ಶೀಟ್ ಅಲ್ಲ, ರಿಪೋರ್ಟ್ ಅಂತಾ ಡಿಜಿಯವರೇ ಹೇಳ್ತಾ ಇದ್ದಾರೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ (Pranab mohantiy) ಸ್ಫೋಟಕ ಮಾಹಿತಿ ನೀಡಿದ್ದಾರೆ.