Home News ದ.ಕ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಂತೆ ಒತ್ತಾಯಿಸಿ ಸುಳ್ಯದ ಅರಂತೋಡಿನಲ್ಲಿ ರಿಕ್ಷಾ ಚಾಲಕರಿಂದ ಮತ್ತು...

ದ.ಕ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಂತೆ ಒತ್ತಾಯಿಸಿ ಸುಳ್ಯದ ಅರಂತೋಡಿನಲ್ಲಿ ರಿಕ್ಷಾ ಚಾಲಕರಿಂದ ಮತ್ತು ಗೂನಡ್ಕದಲ್ಲಿ ಬಿತ್ತಿಪತ್ರ ಪ್ರದರ್ಶನ

Hindu neighbor gifts plot of land

Hindu neighbour gifts land to Muslim journalist

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಂತೆ ಒತ್ತಾಯಿಸಿ ಪಕ್ಷ,ಜಾತಿ ಬೇದ ಮೆರೆತು ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡ ಅಭಿಯಾನವೂ ಇದೀಗ ಬೃಹತ್ ಬೀದಿ ಹೋರಾಟವಾಗಿ ಪರಿವರ್ತನೆಯಾಗುವ ಮುನ್ಸೂಚನೆ ಕಾಣುತ್ತಿದ್ದುಇದರ ಭಾಗವಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಯುವಕರು ವಿಧ್ಯಾರ್ಥಿಗಳು ಹಿರಿಯರು, ರಿಕ್ಷಾ ಚಾಲಕರು ಅಲ್ಲಲ್ಲಿ ಬಿತ್ತಿಪ್ರದರ್ಶನ ನಡೆಸುತ್ತಿದ್ದು ಹಾಗೂ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಾಗಿ ಜನಾಂದೋಲನ ಎಂಬ ಗ್ರೂಪ್ ರಚಿಸಿ ಸಾವಿರಾರು ಮಂದಿ ಗ್ರೂಪ್ ಗೆ ಸೇರ್ಪಡೆಯಾಗಿ ಅದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಅದೇ ರೀತಿ ಇನ್ಸ್ಟಾಗ್ರಾಂ ನಲ್ಲೂ ಪೇಜ್ ಗಳು ರಚನೆಯಾಗಿ ಅದಕ್ಕೆ ಸಂಬಂಧಿಸಿದ ಪೋಸ್ಟರ್ಗಳು ಬಿತ್ತಿಪತ್ರ ಪ್ರದರ್ಶನದ ಫೋಟೋಗಳು ಅಪ್‌ಲೋಡ್ ಆಗುತ್ತಿದ್ದು.ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ್ ತರಲು ನಿರಾಸಕ್ತಿ ತೋರುತ್ತಿರುವ ಜನಪ್ರತಿನಿದಿಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆಯಲ್ಲದೆ,ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಮಾಫಿಯಾ ದ ಬಗ್ಗೆಯು ಆಕ್ರೋಶ ವ್ಯಕ್ತವಾಗುತ್ತಿದೆ.ಇದರ ಮುಂದುವರಿದ ಭಾಗವಾಗಿ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಅರಂತೋಡಿನಲ್ಲಿ ರಿಕ್ಷಾ ಚಾಲಕರು ಜನಾಂದೋಲನ ಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಬಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ.