Home News Pope Francis Funeral: ಇಂದು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ!

Pope Francis Funeral: ಇಂದು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ!

Hindu neighbor gifts plot of land

Hindu neighbour gifts land to Muslim journalist

Pope Francis Funeral: ಕ್ಯಾಥೋಲಿಕ್‌ರ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ವ್ಯಾಟಿಕನ್ ಸಿಟಿಯಲ್ಲಿ ನಡೆಯಲಿದೆ. ಅಂತ್ಯಕ್ರಿಯೆ ಕಾಠ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಶುಕ್ರವಾರವೇ ಆಗಮಿಸಿದ್ದಾರೆ. ಮುರ್ಮು ಅವರ ಜತೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಿಣ್ ರಿಜಿಜು ನೇತೃತ್ವದ ನಿಯೋಗವು ತೆರಳಿದೆ.

ಎರಡು ದಿನಗಳ ವ್ಯಾಟಿಕನ್ ಸಿಟಿ ಭೇಟಿಯಲ್ಲಿ ಮುರ್ಮು ಅವರು ಭಾರತದ ಜನತೆಯ ಪರವಾಗಿ ಪೋಪ್ ಫ್ರಾನ್ಸಿಸ್ ಅವರಿಗೆ ಸೇಂಟ್ ಪೀಟರ್ಸ್ ಸ್ಟೇರ್‌ನಲ್ಲಿ ಅಂತಿಮ ನಮನ ಸಲ್ಲಿಸಲಿದ್ದಾರೆ. ನ್ಯುಮೋನಿಯಾ ಹಾಗೂ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ವ್ಯಾಟಿಕನ್ ಸಿಟಿಯ ಕಾಸಾ ಸಾಂಟಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಅಧ್ಯಕ್ಷ ವ್ಹಾಡಿಮಿರ್ ಝಲೆನೆಸ್ಕಿ ಕೂಡ ಭಾಗವಹಿಸಲಿದ್ದಾರೆ.