Home News Amit Shah: ರೂ.500 ಕ್ಕೆ ಗ್ಯಾಸ್‌ ಸಿಲಿಂಡರ್‌, 15 ಲಕ್ಷ ರೂ.ಗಳ ವಿಮೆ- ಅಮಿತ್‌ ಷಾ...

Amit Shah: ರೂ.500 ಕ್ಕೆ ಗ್ಯಾಸ್‌ ಸಿಲಿಂಡರ್‌, 15 ಲಕ್ಷ ರೂ.ಗಳ ವಿಮೆ- ಅಮಿತ್‌ ಷಾ ಮಹತ್ವದ ಘೋಷಣೆ!!!

Amit Shah

Hindu neighbor gifts plot of land

Hindu neighbour gifts land to Muslim journalist

Amit Shah: ಕೇಂದ್ರ ಸಚಿವ ಅಮಿತ್‌ ಶಾ, ರಾಜ್ಯದ ಲಕ್ಷಾಂತರ ಜನರೊಂದಿಗೆ ಚರ್ಚಿಸಿ ʼಮೋದಿ ಗ್ಯಾರಂಟಿʼ ಸಿದ್ಧಪಡಿಸಿದ್ದೇವೆ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ ಐದು ರಾಜ್ಯಗಳಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಛತ್ತೀಸ್‌ಗಢದಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೇನಾದರೂ ಬಂದರೆ ಬಡ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ ವರೆಗೆ ಉಚಿತ ಚಿಕತ್ಸೆ, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಕೇಂದ್ರ ಸರಕಾರ ಐದು ಲಕ್ಷ ರೂ. ವರೆಗೆ ವಿಮೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಛತ್ತೀಸ್‌ಗಢದ ಜನತೆಗೆ 500 ರೂ. ಗೆ ಗ್ಯಾಸ್‌ ಸಿಲಿಂಡರ್‌, ಜೊತೆಗೆ ರಾಣಿ ದುರ್ಗಾವತಿ ಯೋಜನೆ ಆರಂಭ, ಹಾಗೂ ಅದರ ಅಡಿಯಲ್ಲಿ ಹುಡುಗಿಯರು ವಯಸ್ಕರಾದಾಗ 150,000 ರೂ. ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಲಕ್ಷಾಂತರ ಜನರ ಜೊತೆಗೆ ಚರ್ಚಿಸಿ ʼಮೋದಿ ಗ್ಯಾರಂಟಿʼ ಎಂಬ ಪ್ರಣಾಳಿಕೆ ಸಿದ್ಧಪಡಿಸಿದ್ದು, ಇದರಲ್ಲಿ ಕೃಷಿ ಉನ್ನತಿ ಯೋಜನೆ ಆರಂಭಿಸಿ ಎಕರೆಗೆ 21 ಕ್ವಿಂಟಾಲ್‌ ಭತ್ತವನ್ನು 3100 ರೂ. ಗೆ ಖರೀದಿಗೆ ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: Shiva Rajkumar: ನಟ ಶಿವರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲು!