

ರಾಜಕಾರಣಿಗಳೆಂದರೆ ಸಾಮಾನ್ಯವಾಗಿ ಇವರು ಸುಳ್ಳು ಮಾತನಾಡಿ ವಂಚನೆ ಮಾಡುವವರು ಎಂಬ ಮನಸ್ಥಿತಿ ಇರುತ್ತದೆ. ಆದರೆ ಇದೀಗ ಇಲ್ಲೊಬ್ಬ ರಾಜಕಾರಣಿಯ ಹೆಂಡತಿ ಕಳ್ಳತನ ಫೀಲ್ಡ್ ಗೆ ಇಳಿದಿದ್ದಾಳೆ ಅಂದರೂ ತಪ್ಪಲ್ಲ. ಮದುಮಕ್ಕಳ ಚಿನ್ನಾಭರಣವನ್ನು ಕದ್ದು ಎಸ್ಕೇಪ್ ಆಗಿದ್ದಾಳೆ!!
ಹೌದು, ಬೀದರ್ ನಗರದ ನಗರದ ನಾವದಗೇರಿಯ ಸಂತೋಷಿ ಶಿವರಾಜ ಕೊಳ್ಳೂರ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪಕ್ಕೆ ರಾಜಕಾರಣಿಯ ಪತ್ನಿಯೊಬ್ಬರು ಕೇವಲ ಅತಿಥಿಯಾಗಿ ಹೋಗದೆ, ಅಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾಳೆ.ಮದುಮಕ್ಕಳ ಕೊಠಡಿಯೊಳಗೆ ನುಗ್ಗಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.
ಇಲ್ಲಿ ಮಾತ್ರವಲ್ಲದೇ ಕಾಲಿಟ್ಟಲ್ಲೆಲ್ಲಾ ತನ್ನ ಖದೀಮ ಬುದ್ದಿಯನ್ನು ತೋರಿಸಿರುವ ಇವಳು ಗಿಫ್ಟ್ ಅಂಗಡಿಯಲ್ಲಿ ಕೂಡ ಕಳ್ಳತನ ಮಾಡಿರುವುದು ಇದೀಗ ಸಿಸಿಟಿವಿಯಲ್ಲಿ ಕಂಡುಬಂದಿದೆ.
ಈ ಹಿನ್ನಲೆಯಲ್ಲಿ ಸಿಪಿಐ ಕಪೀಲ್ ನೇತೃತ್ವದ ತಂಡದಿಂದ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ರಾಜಕಾರನಿಯ ಪತ್ನಿಯು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಯಿಂದ 3.80 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.













