Home News ವಿಷದ ಚುಚ್ಚುಮದ್ದು ನೀಡಿ 300 ನಾಯಿಗಳ ಮಾರಣಹೋಮ | ಶ್ವಾನಗಳ ಶವಗಳನ್ನು ಕೆರೆಗೆ ಎಸೆದು ಅಮಾನವೀಯತೆ...

ವಿಷದ ಚುಚ್ಚುಮದ್ದು ನೀಡಿ 300 ನಾಯಿಗಳ ಮಾರಣಹೋಮ | ಶ್ವಾನಗಳ ಶವಗಳನ್ನು ಕೆರೆಗೆ ಎಸೆದು ಅಮಾನವೀಯತೆ ಮೆರೆದ ನಗರ ಪಂಚಾಯತ್

Hindu neighbor gifts plot of land

Hindu neighbour gifts land to Muslim journalist

ವಿಷದ ಇಂಜೆಕ್ಷನ್ ನೀಡಿ 300 ನಾಯಿಗಳ ಕೊಲೆಮಾಡಿ, ನಂತರ ಶ್ವಾನಗಳ ಶವಗಳನ್ನು ಕೆರೆಗೆ ಎಸೆದಿರುವ ಅಮಾನವೀಯ ಘಟನೆ ಹೈದರಾಬಾದ್‍ನ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಏರಿಯಾದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ ಈ ಬಗ್ಗೆ ನಗರ ಪಂಚಾಯತ್‍ಗೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಸಿಬ್ಬಂದಿ ಜುಲೈ 24ರಂದು 300ಕ್ಕೂ ಹೆಚ್ಚು ನಾಯಿಗಳು ತಿನ್ನುವ ಊಟದಲ್ಲಿ ವಿಷ ಬೆರೆಸಿದ್ದು, ಇನ್ನು ಕೆಲವು ನಾಯಿಗಳಿಗೆ ವಿಷದ ಇಂಜೆಕ್ಷನ್ ಚುಚ್ಚಲಾಗಿದೆ. ನಂತರ ಸಾವನ್ನಪ್ಪಿದ ನಾಯಿಗಳ ಶವಗಳನ್ನು ಕೆರೆಗೆ ಎಸೆದಿದ್ದಾರೆ.

ಬೀದಿ ನಾಯಿಗಳ ಸಂತಾನಹರಣ ಮಾಡುವ ಬದಲು ಅವುಗಳನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಈ ಅಮಾನವೀಯ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲೀ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ರೀತಿಯ ಆದೇಶ ಹೊರಡಿಸಿದ ಪಂಚಾಯತ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಕೆರೆಯಲ್ಲಿ ಹಾಕಿದ್ದ ನಾಯಿಗಳ ಶವಗಳು ನೀರಿನಲ್ಲಿ ಕೊಳೆತಿದ್ದು, ಸುತ್ತಲೂ ದುರ್ವಾಸನೆ ಹರಡಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಬಹುದೆಂಬ ಭೀತಿಯು ಸಾರ್ವಜನಿಕರಲ್ಲಿ ಮೂಡಿದೆ.

ಈ ಬಗ್ಗೆ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.