Home News Shimogga: ಶಿವಮೊಗ್ಗ ಬದಲು ಬೆಳಗಾವೀಲಿ ಇಳಿದ ವಿಮಾನ: ಪ್ರಯಾಣಿಕರ ಪರದಾಟ

Shimogga: ಶಿವಮೊಗ್ಗ ಬದಲು ಬೆಳಗಾವೀಲಿ ಇಳಿದ ವಿಮಾನ: ಪ್ರಯಾಣಿಕರ ಪರದಾಟ

Hindu neighbor gifts plot of land

Hindu neighbour gifts land to Muslim journalist

Shimogga: ತಿರುಪತಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಸ್ಟಾರ್‌ಏರ್‌ಲೈನ್ ವಿಮಾನವು ವಿಪರೀತ ಮಳೆ ಕಾರಣದಿಂದಾಗಿ ಶಿವಮೊಗ್ಗದಲ್ಲಿ ಇಳಿಯದೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿರುವ ಘಟನೆ ಭಾನುವಾರ ನಡೆದಿದೆ.

ಈ ಘಟನೆಯಿಂದಾಗಿ 60 ಮಂದಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ತಿರುಪತಿಯಿಂದ ಶಿವಮೊಗ್ಗಕ್ಕೆ ಹೋಗಬೇಕಿದ್ದ ಸ್ಟಾರ್‌ಏರ್‌ಲೈನ್ಸ್ ವಿಮಾನವನ್ನು ಶಿವಮೊಗ್ಗದಲ್ಲಿ ಭಾರಿ ಮಳೆಯಾಗುತ್ತಿದೆ ಎಂಬ ಸಂದೇಶ ಬರು ತ್ತಿದ್ದಂತೆ ಬೆಳಗಾವಿಗೆ ಕೊಂಡೊಯ್ಯಲಾಯಿತು.

ಏರ್‌ಲೈನ್ಸ್‌ ಸಿಬ್ಬಂದಿಯು ಪ್ರಯಾ ಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲಾಯಿತು. ಆದರೆ ಬೆಳಗಾವಿ ಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ, ಏರ್‌ಲೈನ್ಸ್ ಸಿಬ್ಬಂದಿಯ ವರಸೆಯೇ ಬದಲಾ ಗಿದ್ದು, ಪರ್ಯಾಯ ವ್ಯವಸ್ಥೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಇದ ರಿಂ ದಾಗಿ 60 ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು ಎಂದು ತಿಳಿದುಬಂದಿದೆ.