Home News Second Puc Results: ರಾಜ್ಯದಲ್ಲಿ ಫಿಲೋಮಿನಾ ಪ ಪೂ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ 4 ರಾಂಕ್...

Second Puc Results: ರಾಜ್ಯದಲ್ಲಿ ಫಿಲೋಮಿನಾ ಪ ಪೂ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ 4 ರಾಂಕ್ ಗಳು!

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: 2024 – 25ನೇ ಸಾಲಿನ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ ಲಭಿಸಿದೆ ಮಾತ್ರವಲ್ಲ
ವಾಣಿಜ್ಯ ವಿಭಾಗದಲ್ಲಿ 4 ರಾಂಕ್ ಗಳನ್ನು ತನ್ನದಾಗಿಸಿಕೊಂಡಿದೆ.

ಶೇಕಡ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಈ ಬಾರಿ ಕಾಲೇಜಿನ 20 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಂ ದೀಪಾ ನಾಯಕ್, ನೀತಿ ಎನ್. ಬಿ, ಫಿದಾ ಹಲೀಮ, ಅಧಿತಿ. ಡಿ 591ಅಂಕಗಳನ್ನು ಪಡೆದು ರಾಜ್ಯದಲ್ಲಿ 9ನೇ ರಾಂಕ್ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಆಕಾಶ್ ಪಿ ಜೆ 588 ಮತ್ತು ಕಲಾ ವಿಭಾಗದಲ್ಲಿ ಧ್ರುವ ಜೆ ಭಂಡಾರಿಯವರು 562 ಅಂಕಗಳನ್ನು ಗಳಿಸಿ ಪ್ರಥಮರೆನಿಸಿಕೊಂಡಿದ್ದಾರೆ. 155 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 405 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.