

ಮಂಗಳೂರು: ಎನ್ಐಎ ತನಿಖೆ ಆದ ನಂತರ ಹಲವಾರು ಪಿ ಎಫ್ ಐ ಕಾರ್ಯಕರ್ತರ ಅಕ್ರಮ ಚಟುವಟಿಕೆಗಳು ಕಂಡುಬಂದಿದ್ದು ಇದೀಗ ಪೊಲೀಸರು ತಡರಾತ್ರಿ ಅನೇಕ ಪಿಎಫ್ ಐ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅನುಮತಿ ಇಲ್ಲದೆ ಅನೇಕ ಕಡೆ ಪಿಎಫ್ಐ ನಾಯಕರ ಬಂಧನ ಖಂಡಿಸಿ ಪ್ರತಿಭಟಿಸಿದವರ ಮೇಲೆ 107 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಇಸ್ಮಾಯಿಲ್ ಎಂಜಿನೀರ್ ಬಜ್ಪೆ,ಷರೀಫ್ ಪಾಂಡೇಶ್ವರ
ಇಕ್ಬಾಲ್ ಕೆತ್ತಿಕಲ್, ನೌಷಾದ್ ಸುರತ್ಕಲ್ ಸೇರಿ
ಮಧ್ಯರಾತ್ರಿ ಹಲವರ ಬಂಧನವಾಗಿದೆ.ಪಿಎಫ್ ಐ ನಾಯಕರು
ಸುಳ್ಳು ಕೇಸ್ ಹಾಕಿ ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಪಿಎಫ್ ಐ ಆರೋಪಿಸಿದೆ.
ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ಏಕಕಾಲಕ್ಕೆ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿ ಹಲವು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.













