

Petrol Pump: ಮೊದಲೇ ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ. ಅದರಲ್ಲೂ ಇತ್ತೀಚೆಗೆ ಪೆಟ್ರೋಲ್ ಕದಿಯುವ ದಂದೆ ಅತಿಯಾಗುತ್ತಿದ್ದು, ಪೆಟ್ರೋಲ್ ರೇಟ್ ಬಂಕ್ ಬಂಕ್ ಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಇಷ್ಟು ಮಾತ್ರ ಅಲ್ಲದೇ ಪೆಟ್ರೋಲ್ ಸುಲಿಗೆ ಶುರು ಮಾಡಿದ್ದಾರೆ. ಇದರಿಂದ ವಾಹನ ಸವಾರರು ಯಾವ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸೋದು ಅಂತಾ ಚಿಂತಿಸುವ ಪರಿಸ್ಥಿತಿ ಆಗಿದೆ.
ಯಾಕೆಂದರೆ ಪೆಟ್ರೋಲ್ ಬಂಕ್ ನಲ್ಲಿ ಇದೀಗ ಅಲ್ಲಲ್ಲಿ ಮೋಸ ನಡೆಯುವುದು ಕೇಳಿ ಬರುತ್ತಲೇ ಇದೆ.
ಹೌದು, ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ (Tumakuru Kunigal) ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ ಎಚ್.ಪಿ ಪೆಟ್ರೋಲ್ ಬಂಕ್‌ನಲ್ಲಿ (KP Petrol Pump) ಮಹಾಮೋಸವಾಗಿರೋ ಆರೋಪ ಕೇಳಿ ಬಂದಿದೆ. ಬೈಕ್ ಸವಾರನಿಗೆ (Bike Rider) 110 ರೂಪಾಯಿಗೆ ಕೇವಲ 300 ಎಂ.ಎಲ್ ಮಾತ್ರ ಪೆಟ್ರೋಲ್ ಬಂದಿದೆ ಎಂದು ಸವಾರ ಆರೋಪ ಮಾಡಿದ್ದು ಎಲ್ಲೆಡೆ ಸುದ್ದಿ ವೈರಲ್ ಆಗಿದೆ.
ಇದೇ ರೀತಿ ಕಳೆದ ವಾರವಷ್ಟೇ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ನಡೆದಿತ್ತು, ಈಗ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಹಿನ್ನೆಲೆ ಪೆಟ್ರೋಲ್ ಬಂಕ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tirupati: ಶಾಲೆಗೆ ಹೋಗೋ ಮಕ್ಕಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ ನಂತರ ಕೊಲೆ













