Home News F35 fighter jet: ತಮಾಷೆಯ ವಸ್ತುವಾದ F-35 ಯುದ್ಧ ವಿಮಾನ – ಫೈಟರ್ ಜೆಟ್ಗೇ ನಕಲಿ...

F35 fighter jet: ತಮಾಷೆಯ ವಸ್ತುವಾದ F-35 ಯುದ್ಧ ವಿಮಾನ – ಫೈಟರ್ ಜೆಟ್ಗೇ ನಕಲಿ ಆಧಾರ್ ಕಾರ್ಡ್ ತಯಾರಿಸಿದ ಜನರು

Hindu neighbor gifts plot of land

Hindu neighbour gifts land to Muslim journalist

F35 fighter jet: ವಿಶ್ವದ ಅತ್ಯಂತ ಆಧುನಿಕ ಯುದ್ಧ ವಿಮಾನ ಎಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕ ನಿರ್ಮಿತ ಎಫ್-35 ಜೆಟ್ ಅನ್ನು ಭಾರತದಲ್ಲಿ ಮೀಮ್ ಆಗಿ ಪರಿವರ್ತಿಸಲಾಗುತ್ತಿದೆ.. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿರುವ ಬ್ರಿಟಿಷ್ ರಾಯಲ್ ನೇವಿಯ ಅತ್ಯಾಧುನಿಕ ಎಫ್-35 ಫೈಟರ್ ಜೆಟ್ ಅನ್ನು ಜನರು ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಇದಕ್ಕೆ ಸಂಬಂಧಿಸಿದ ಮೀಮ್‌ಗಳಿಂದ ತುಂಬಿದೆ.

ಬಳಕೆದಾರರೊಬ್ಬರು ಫೈಟರ್ ಜೆಟ್‌ನ ನಕಲಿ ಆಧಾರ್ ಕಾರ್ಡ್ ಅನ್ನು ಹಂಚಿಕೊಂಡು “ಎಫ್-35 ಬಿ ನಾಯರ್ ಅವರ ಆಧಾರ್ ಕಾರ್ಡ್” ಎಂದು ಬರೆದಿದ್ದಾರೆ. ಜೂನ್ 14ರಂದು ಬ್ರಿಟಿಷ್ ಫೈಟರ್ ಜೆಟ್ ಎಫ್-35 ತಾಂತ್ರಿಕ ಸಮಸ್ಯೆಯಿಂದಾಗಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅನೇಕ ಜನರು ಅದರ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ ಅಷ್ಟೆ ಅಲ್ಲದೆ ಅದರ ಮೇಲೆ ಪ್ಯಾಥೋ ಹಾಡುಗಳನ್ನು ಹಾಡಲು ಆರಂಭಿಸಿದ್ದಾರೆ. ಇದರೊಂದಿಗೆ ಅನೇಕ ಜನರು ಅದರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಮಾಡಿ, ಹಾಗೆ ಅದಕ್ಕೆ ಭಾರತೀಯ ಪೌರತ್ವವನ್ನು ನೀಡುವಂತೆ ಒತ್ತಾಯಿಸಿದ್ದಾರೆ.

ಈ ಫೈಟರ್ ಜೆಟ್‌ನ ಪ್ಯಾನ್ ಕಾರ್ಡ್ ನಲ್ಲಿ ಇದರ ತಂದೆಯ ಹೆಸರು ಲಾಕ್‌ಹೀಡ್ ಮಾರ್ಟಿನ್ ಎಂದು ಹೇಳಲಾಗಿದ್ದು, ಈ ಫೈಟರ್ ಜೆಟ್ ತಯಾರಿಸಿದ ಅಮೇರಿಕನ್ ಕಂಪನಿ ಇದಾಗಿದೆ. ಇದಕ್ಕೂ ಮೊದಲು, ಕೇರಳ ಪ್ರವಾಸೋದ್ಯಮವು ತನ್ನ ಅಧಿಕೃತ ಪೋಸ್ಟ್ ನಲ್ಲಿ ಈ ಫೈಟರ್ ಜೆಟ್ ಅನ್ನು ಹಂಚಿಕೊಂಡಿದೆ. ಪ್ರವಾಸೋದ್ಯಮ ಫೈಟರ್ ಜೆಟ್‌ನ ಫೋಟೋವನ್ನು ಪೋಸ್ಟ್ ಮಾಡಿದಕ್ಕೆ ಅನೇಕರು ಅನೇಕ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೇರಳವು ತುಂಬಾ ಸುಂದರವಾದ ಸ್ಥಳವಾಗಿದೆ ಎಂದು ಒಬ್ಬರು ಬರೆದಿದ್ದಾರೆ. ನನಗೆ ಇಲ್ಲಿಂದ ಹೊರಡಬೇಕು ಅಂತ ಅನಿಸುತ್ತಿಲ್ಲ. ಜನರು ಇಲ್ಲಿಗೆ ಭೇಟಿ ನೀಡಿ ಎಂದು ನಾನು ಸಲಹೆ ನೀಡುತ್ತೇನೆ. ಇದರೊಂದಿಗೆ, 5 ಸ್ಟಾರ್ ರೇಟಿಂಗ್ ಅನ್ನು ಸಹ ನೀಡಲಾಗಿದೆ.

ಇದನ್ನೂ ಓದಿ: Accident: 10 ಜನರನ್ನು ಹೊತ್ತೊಯ್ಯುತ್ತಿದ್ದ ಕಾರು ಗೋಡೆಗೆ ಡಿಕ್ಕಿ – ವರ ಸೇರಿದಂತೆ 8 ಮಂದಿ ಸಾವು