Home News Ballary: ಹಂದಿ ಕದ್ದ ಕಳ್ಳನನ್ನು ಹಿಡಿದು ಥಳಿಸಿದ ಜನ!!

Ballary: ಹಂದಿ ಕದ್ದ ಕಳ್ಳನನ್ನು ಹಿಡಿದು ಥಳಿಸಿದ ಜನ!!

Hindu neighbor gifts plot of land

Hindu neighbour gifts land to Muslim journalist

Ballary: ಹಂದಿಗಳನ್ನು ಕಳವು ಮಾಡಿದ ಆರೋಪದ ಮೇಲೆ ಸಾರ್ವಜನಿಕರು ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಿ ಠಾಣೆಗೆ ಒಪ್ಪಿಸಿದ ಘಟನೆ ಸೋಮವಾರ ಸಿರುಗುಪ್ಪ ವಲಯದ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಧುವಾಳ ಗ್ರಾಮದಲ್ಲಿ ನಡೆದಿದೆ.

ಹೌದು, ಬಳ್ಳಾರಿ ಜಿಲ್ಲೆಯ ಸಿಂಧುವಾಳ ಗ್ರಾಮದ ಯರಗುಡಿ ರಾಮಾಂಜಿನಿ ಅವರ ಹಂದಿಗಳ ಹಟ್ಟಿಯಿಂದ ಹಂದಿಗಳನ್ನು ಆರೋಪಿ ಶಂಕರ ಕೋಲಿ ಹಾಗೂ ಇತರ ಇಬ್ಬರು ಬೊಲೆರೊ ವಾಹನದಲ್ಲಿ ಕಳವು ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಅವರನ್ನು ಸಾರ್ವಜನಿಕರು ಬೆನ್ನತ್ತಿ ಒಬ್ಬನನ್ನು ಹಿಡಿದಿದ್ದು, ಈ ಸಂದರ್ಭದಲ್ಲಿ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಅಂದಹಾಗೆ ಯರಗುಡಿ ರಾಮಾಂಜಿನಿ ಅವರಿಗೆ ಸೇರಿದ 3 ಹಂದಿ, ಗೂಳ್ಯಂನ ಶಂಕರ ಅವರಿಗೆ ಸೇರಿದ 5 ಹಂದಿ ಒಟ್ಟು 8 ಹಂದಿ ಸಮೇತ ಸಿಕ್ಕಿಬಿದ್ದಿದ್ದು ಇವುಗಳ ಮೌಲ್ಯ ₹ 80 ಸಾವಿರ ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ, ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.