Home News Pendrive Movie: ‘ಪೆನ್​ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ! ಸಿನಿಮಾದಲ್ಲೂ ವರ್ತೂರ್ ಸಂತೋಷ್ ಜೊತೆಗಿರ್ತಾರ?

Pendrive Movie: ‘ಪೆನ್​ಡ್ರೈವ್’ ಚಿತ್ರದಲ್ಲಿ ತನಿಷಾ ಕುಪ್ಪಂಡ! ಸಿನಿಮಾದಲ್ಲೂ ವರ್ತೂರ್ ಸಂತೋಷ್ ಜೊತೆಗಿರ್ತಾರ?

Pendrive Movie:

Hindu neighbor gifts plot of land

Hindu neighbour gifts land to Muslim journalist

Pendrive Movie: ಕನ್ನಡ ಚಿತ್ರರಂಗಕ್ಕೆ ಹಲವಾರು ಸಿನಿಮಾಗಳು ಒಂದರ ಹಿಂದೆ ಒಂದು ಲಗ್ಗೆ ಇಡುತ್ತಿದೆ. ಇದೀಗ ಪೆನ್​ಡ್ರೈವ್ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ಒಂದು ಬರುತ್ತಿದೆ. ಈ ಚಿತ್ರದ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಅವರು ಜುಲೈ 4ರಂದು ಈ ಚಿತ್ರದ ಶೀರ್ಷಿಕೆ ಅನಾವರಣ ಆಗಲಿದೆ ಎಂದು ತಿಳಿಸಿದ್ದಾರೆ.

Trekking: ಇನ್ಮೇಲೆ ಚಾರಣ ಪ್ರಿಯರಿಗೆ ಹೊಸ ರೂಲ್ಸ್ ಜಾರಿ! ಜುಲೈನಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್​ಲೈನ್ ಬುಕಿಂಗ್ ಕಡ್ಡಾಯ!

ಇನ್ನು ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಅನ್ನೋ ಕುತೂಹಲ ನಿಮಗೇ ಇದ್ದೇ ಇರುತ್ತದೆ. ವಿಶೇಷ ಅಂದ್ರೆ ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್’ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದರು. ಜೊತೆಗೆ ಬಿಗ್ ಬಾಸ್ ನಲ್ಲಿ ಕುಪ್ಪಂಡ ಜೊತೆ ವರ್ತೂರ್ ಸಂತೋಷ್ ತುಂಬಾ ಕ್ಲೋಸ್ ಆಗಿರುವ ವಿಚಾರ ಗೊತ್ತೇ ಇದೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚಾಗಿ ಇಬ್ಬರೂ ಒಟ್ಟಿಗೆ ಕಾಣಿಸುತ್ತಾರೆ. ಈ ಕಾರಣದಿಂದಲೇ ಪೆನ್​ಡ್ರೈವ್ ಸಿನಿಮಾದಲ್ಲಿ (Pendrive Movie) ತನಿಷಾ ಕುಪ್ಪಂಡ ಜೊತೆಗೆ ವರ್ತೂರ್ ಸಂತೋಷ್ ಇರ್ತಾರ ಅನ್ನೋ ಕುತೂಹಲಕ್ಕೆ ದಾರಿ ಮಾಡಿದೆ. ಸದ್ಯ ನಿಮ್ಮೆಲ್ಲರ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸದ್ಯ ‘ಪೆನ್​ಡ್ರೈವ್’ ಚಿತ್ರವನ್ನು ಲಯನ್ ಆರ್​. ವೆಂಕಟೇಶ್ ಮತ್ತು ಲಯನ್ ಎಸ್ ವೆಂಕಟೇಶ್​ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ  ತನಿಷಾ ಕುಪ್ಪಂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ರಾಧಿಕಾ, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಭಾಗ್ಯ, ಗೀತಪ್ರಿಯಾ, ಗೀತಾ ಮೊದಲಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇನ್ನು ವಿಶೇಷ ಅಂದ್ರೆ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಈ ಚಿತ್ರದ ಟೈಟಲ್​ನ ಅನಾವರಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಸಿನಿಮಾ ಬಗ್ಗೆ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡಿದ್ದು, ‘ಇದೊಂದು ಪಕ್ಕಾ ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಮಾಡಬೇಕು ಎನ್ನುವ ಆಲೋಚನೆ ಮೊದಲೇ ಇತ್ತು. ಆದರೆ, ಟೈಟಲ್ ರಿಜಿಸ್ಟರ್ ಮಾಡಿರಲಿಲ್ಲ. ಈಗ ಪೆನ್​ಡ್ರೈವ್ ವಿಚಾರ ಚರ್ಚೆಯಲ್ಲಿರುವುದರಿಂದ ಸ್ವಲ್ಪ ಬೇಗ ಸಿನಿಮಾ ಮಾಡಬೇಕು ಎನಿಸಿತು ಅಷ್ಟೇ’ ಎಂದಿದ್ದಾರೆ.

Airtel, Jio and Vi Plans: ಇಂದಿನಿಂದ ಜಿಯೋ, ಏರ್‌ಟೆಲ್‌ ಶುಲ್ಕ ಏರಿಕೆ; ಪರಿಷ್ಕೃತ ದರ ಪಟ್ಟಿ ಇಲ್ಲಿದೆ