Home News Pejawar Shri: ಸ್ವಾಮೀಜಿಗಳು ರಾಜಕೀಯದ ಕುರಿತು ಮಾತನಾಡಬಾರದು ಎಂದವರಿಗೆ ಪೇಜಾವರ ಶ್ರೀ ಯಿಂದ ಖಡಕ್‌ ರಿಪ್ಲೈ

Pejawar Shri: ಸ್ವಾಮೀಜಿಗಳು ರಾಜಕೀಯದ ಕುರಿತು ಮಾತನಾಡಬಾರದು ಎಂದವರಿಗೆ ಪೇಜಾವರ ಶ್ರೀ ಯಿಂದ ಖಡಕ್‌ ರಿಪ್ಲೈ

Pejawar Shri

Hindu neighbor gifts plot of land

Hindu neighbour gifts land to Muslim journalist

Pejawar Shri: ದಾವಣಗೆರೆಗೆ ಆಗಮಿಸಿದ್ದ ವೇಳೆ ಚಂದ್ರಶೇಖರ್ ಶ್ರೀ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪೇಜಾವರ ಶ್ರೀಗಳು ಖಡಕ್ ಆಗಿ ಉತ್ತರ ನೀಡಿದ್ದಾರೆ.

ಸ್ವಾಮೀಜಿಗಳು ರಾಜಕೀಯ ಮಾತನಾಡಬಾರದು ಎನ್ನುವುದು ಸರಿಯಲ್ಲ, ಅವರು ಕೂಡ ಮತ ಹಾಕಿದ್ದಾರೆ ಹಾಗಾಗಿ ಸ್ವಾಮೀಜಿಗಳು ರಾಜಕೀಯ ಮಾತನಾಡೋದು ನನ್ನ ಪ್ರಕಾರ ತಪ್ಪಲ್ಲ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀ (Pejawar Mutt Seer) ಹೇಳಿದ್ದಾರೆ.

ಜೊತೆಗೆ ಹಿಂದುತ್ವದ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡಿಸಿದ ಪೇಜಾವರ ಶ್ರೀ, ಹಿಂದೂಗಳು ದ್ವೇಷ ಸಾಧಿಸುತ್ತಾರೆ ಹಿಂಸಾವಾದಿಗಳು ಅಂತ ಹೇಳಿದ್ದಾರೆ. ಹಾಗಾದ್ರೆ ನಮಗೆ ಕೋರ್ಟ್ ಕಚೇರಿಗಳು ಯಾಕೆ? ಅವುಗಳ ಅಗತ್ಯ ಇರಲಿಲ್ಲ! ನೇರವಾಗಿ ಹಿಂಸಾವಾದವನ್ನು ಮಾಡ್ತಿದ್ದರು, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಇದು ಪ್ರಚೋದನಕಾರಿ ಭಾಷಣ ಎಂದು ಹೇಳಿದರು.

ಯಾರೋ ಬೇರೆಯವರು ಮಾತ್ನಾಡಿದ್ರೆ ಕ್ರಮ ಕೈಗೊಳ್ಳುತ್ತಾರೆ, ಅದ್ರೆ ರಾಹುಲ್ ಗಾಂಧಿ ಮಾತನಾಡಿದ್ದಕ್ಕೆ ಕ್ರಮ ಆಗಿಲ್ಲ ಎಂದ ಪೇಜಾವರ ಶ್ರೀ, ಸಮಾಜ ಸಮಾಜದ ನಡುವೆ ಎರಡು ಪಂಗಡ ನಡುವೆ ದ್ವೇಷ ಬಿತ್ತಿದ್ರೆ ಕಷ್ಟ, ದ್ವೇಷ ಬಿತ್ತುವ ಕೆಲಸ ಬಿಟ್ಟು ಅವರ ಕೆಲಸ ಮಾಡಲಿ. ಈಗಾಗಲೇ ಮಣಿಪುರದಲ್ಲಿ ನಡೆದ ಘಟನೆ  ಶಮನ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಎಂದು ಹೇಳಿದರು.

Mudigere: ನಿಷೇಧಿತ ಜಲಪಾತದಲ್ಲಿ ಯುವಕರ ಮೋಜು, ಮಸ್ತಿ; ಪೊಲೀಸರ ಎಂಟ್ರಿ, ಚಡ್ಡಿಯಲ್ಲೇ ಓಡಿದ ಪ್ರವಾಸಿ ಯುವಕರು