Home News Pavitra Gowda: ಮಹಿಳಾ ದಿನಾಚರಣೆಗೆ ಹೆಣ್ಮಕ್ಕಳಿಗೆ ಸ್ಪೆಷಲ್‌ ಮೆಸೇಜ್‌ ನೀಡಿದ ಪವಿತ್ರಾ ಗೌಡ!

Pavitra Gowda: ಮಹಿಳಾ ದಿನಾಚರಣೆಗೆ ಹೆಣ್ಮಕ್ಕಳಿಗೆ ಸ್ಪೆಷಲ್‌ ಮೆಸೇಜ್‌ ನೀಡಿದ ಪವಿತ್ರಾ ಗೌಡ!

Darshan-Pavithra Gowda

Hindu neighbor gifts plot of land

Hindu neighbour gifts land to Muslim journalist

Pavitra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ತಮ್ಮ ರೆಡ್‌ ಕಾರ್ಪೆಟ್‌ ಸ್ಟುಡಿಯೋ ರೀ-ಓಪನ್‌ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಜೈಲಿನಿಂದ ಹೊರ ಬಂದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಡಿಸೈನರ್‌ವೇರ್‌ಗಳ ಫೋಟೋಶೂಟ್‌, ವೀಡಿಯೋಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೀಗ ಪವಿತ್ರಾ ಗೌಡ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. Happy Women’s Day ಎಂದು ಮಹಿಳೆಯರಿಗೆ ಶುಭಾಶಯ ಕೋರಿದ್ದಾರೆ.

“ಡಿಯರ್ ಮಿ, ನಿನ್ನನ್ನು ನಿನ್ನೆಗಿಂತ ಇವತ್ತು ಸ್ವಲ್ಪ ಹೆಚ್ಚಾಗಿಯೇ ಪ್ರೀತಿಸು, ಇತರಿಗಿಂತ ಮೊದಲು ನಿಮಗೆ ನೀವು ಆದ್ಯತೆಯನ್ನು (priority) ಕೊಟ್ಟುಬಿಡಿ, ನಿಮ್ಮ ಗುರಿಗಳನ್ನು ಬೆನ್ನಟ್ಟಿ, ನಿಮ್ಮ ಬಳಿ ಏನು ಇದೆಯೋ ಅದಕ್ಕಾಗಿ ನೀವು ಕೃತಜ್ಞರಾಗಿರಿ, ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಿ, ಜೊತೆಗೆ ನೀವೋಬ್ಬ ಅದ್ಭುತ ಮಹಿಳೆ ಅನ್ನೋದನ್ನು ನೆನೆಪಿಸಿಕೊಂಡು ಈ ದಿನವನ್ನು ಸೆಲೆಬ್ರೇಟ್ ಮಾಡಿ ಎಂದು ಮಹಿಳಾ ದಿನದ ಶುಭಾಶಯವನ್ನು ಕೋರಿದ್ದಾರೆ.