Home News Parvati Siddaramaiah: ಅಪರೂಪಕ್ಕೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಸಿಎಂ ಸಿದ್ದು ಪತ್ನಿ ಪಾರ್ವತಿ !!

Parvati Siddaramaiah: ಅಪರೂಪಕ್ಕೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಸಿಎಂ ಸಿದ್ದು ಪತ್ನಿ ಪಾರ್ವತಿ !!

Hindu neighbor gifts plot of land

Hindu neighbour gifts land to Muslim journalist

Parvati Siddaramaiah: ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಎಂದಿಗೂ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡವರಲ್ಲ. ರಾಜಕೀಯ ವಿಚಾರಗಳಲ್ಲಿ ತಲೆ ಹಾಕಿದವರಲ್ಲ. ಕ್ಯಾಮೆರಾಗಳ ಕಣ್ಣಿಗೆ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡವರಲ್ಲ. ಹೀಗಾಗಿ ಸಿದ್ದು ಪತ್ನಿ ಪಾರ್ವತಿ(Parvati Siddaramaiah) ಹೇಗಿದ್ದಾರೆ ಎಂಬುದು ಎಲ್ಲರಿಗೂ ಕುತೂಹಲ. ಆದರೀಗ ಚಾಮುಂಡಿ ಬೆಟ್ಟದಲ್ಲಿ ಪಾರ್ವತಿಯವರು ಕೊಂಚ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ.

ಹೌದು, ವಿಶ್ವ ವಿಖ್ಯಾತ ದಸರಾ(Dasara) ಹಬ್ಬ ಹಿನ್ನೆಲೆಯಲ್ಲಿ ನಿನ್ನೆ ಸಿಎಂ ಕುಟುಂಬ ಸಮೇತ ಮೈಸೂರಿಗೆ ಭೇಟಿ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಾಗೂ ಸೊಸೆ ಸ್ಮಿತಾ ಅವರು ಕೂಡ ತಾಯಿಯ ದರ್ಶನಕ್ಕೆ ಬಂದಿದ್ದರು. ಮೃತ ರಾಕೇಶ್ ಪತ್ನಿ ಸ್ಮಿತಾ ಅವರು ತಮ್ಮ ಅತ್ತೆಯ ಜೊತೆಗೆ ಬಂದಿದ್ದರು. ಒಂದೇ ಕಾರಿನಲ್ಲಿ ಸ್ಮಿತಾ ಹಾಗೂ ಪಾರ್ವತಿ ಅವರು ಬಂದಿದ್ದರು. ಸ್ಮಿತಾ ಅವರು ಕಾರು ಇಳಿದು ತಾಯಿಯ ದರ್ಶನ ಪಡೆದರು. ಆದರೆ ಪಾರ್ವತಿ ಅವರು ಕಾರಿನಿಂದ ಕೆಳಗೆ ಇಳಿಯದೆ, ಅಲ್ಲಿಯೇ ತಾಯಿಗೆ ನಮಸ್ಕರಿಸಿದರು. ಈ ವೇಳೆ ಮಾಧ್ಯಮದವರ ಕಣ್ಣಿಗೆ ಬಿದ್ದ ಪಾರ್ವತಿ ಅವರು, ತಕ್ಷಣ ಸೆರಗನ್ನು ಕವರ್ ಮಾಡಿಕೊಂಡರು. ಅಷ್ಟರೊಳಗೆ ಪಾರ್ವತಿ ಅವರು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ‌.