Home News Yash Mother : ಪಾರ್ವತಮ್ಮನವರಿಗೆ ಇಷ್ಟು ಧಿಮಾಕು ಇರಲಿಲ್ಲ – ಯಶ್ ತಾಯಿ ಫುಲ್ ಟ್ರೋಲ್

Yash Mother : ಪಾರ್ವತಮ್ಮನವರಿಗೆ ಇಷ್ಟು ಧಿಮಾಕು ಇರಲಿಲ್ಲ – ಯಶ್ ತಾಯಿ ಫುಲ್ ಟ್ರೋಲ್

Hindu neighbor gifts plot of land

Hindu neighbour gifts land to Muslim journalist

Yash Mother : ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯಶ್ ತಾಯಿ ಫುಲ್ ಟ್ರೋಲ್ ಆಗುತ್ತಿದ್ದಾರೆ. ಯಶ್ ತಾಯಿ ಎಂಬ ಕಾರಣಕ್ಕೆ ಅವರು ಟ್ರೋಲ್ ಆಗುತ್ತಿರುವುದಲ್ಲ ನಿರ್ಮಾಪಕರೆಂಬ ರೀಸನ್ ನಿಂದ ಅವರು ಟ್ರೋಲಿಗರ ಬಾಯಿಗೆ ತುತ್ತಾಗುತ್ತಿದ್ದಾರೆ.

ಯಸ್, ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಈಗ ತಮ್ಮದೇ ಪ್ರೊಡಕ್ಷನ್ ಹೌಸ್ ಮಾಡಿ ಕೊತ್ತಲವಾಡಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆದರೆ ಮಾಧ್ಯಮಗಳ ಜೊತೆ ಅವರು ಮಾತನಾಡುವ ಧಾಟಿ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದು ಪಾರ್ವತಮ್ಮನವಿರಗೂ ಇಷ್ಟು ಧಿಮಾಕು ಇರ್ಲಿಲ್ಲ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ರಫ್ ಆಗಿ ಮಾತನಾಡುತ್ತಿದ್ದರು. ಯಶ್ ಸಿನಿಮಾ ಬಗ್ಗೆ ಏನಂದ್ರು ಎಂದರೆ ಅವನ ಜೊತೆ ನಾನು ಮಾತನಾಡಿಲ್ಲ. ಅವನು ನೋಡಿದ್ರೆ ಸಿನಿಮಾ ಹಿಟ್ ಆಗಲ್ಲ. ಸೊಸೆ ರಾಧಿಕಾ ಪಂಡಿತ್ ಅಮೆರಿಕಾದಲ್ಲಿದ್ದಾಳೆ ಇಂದು ಹೇಳಿದ್ದಾರೆ. ಅವರ ಮಾತಿನ ಶೈಲಿ ಒರಟಾಗಿತ್ತು. ಜೊತೆಗೆ ನಾವು ಗೌಡ್ರು. ಅಂಬರೀಷಣ್ಣ ಎಲ್ಲಾ ನೋಡಿಲ್ವಾ? ನಮ್ಮ ಮಾತು ಸ್ವಲ್ಪ ಒರಟು. ನೇರವಾಗಿ ಇದ್ದಿದ್ದನ್ನು ಹೇಳಿಬಿಡ್ತೀವಿ ಎಂದಿದ್ದರು.

ಪುಷ್ಪ ಈ ಮಾತಿಗೆ ನೆಟ್ಟಿಗರು ಟ್ರೋಲ್ ಮಾಡಿದ್ದು, ಸಿನಿಮಾ ಆಗಲೇ ಇಷ್ಟು ಧಿಮಾಕಿನಲ್ಲಿ ಮಾತನಾಡುತ್ತಾರೆ. ಪಾರ್ವತಮ್ಮನವರು ನೂರಾರು ಸಿನಿಮಾ ಮಾಡಿ ಸಾಕಷ್ಟು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದವರು. ಆದರೂ ಅವರಿಗೆ ಸ್ವಲ್ಪವೂ ಮಾತಿನಲ್ಲಿ ಒರಟುತನ ಇರ್ಲಿಲ್ಲ. ಆದರೆ ಒಂದೇ ಸಿನಿಮಾ ಮಾಡಿ ಯಶ್ ಅವರ ತಾಯಿ ಇಷ್ಟೊಂದು ದರ್ಪ ತೋರುತ್ತಾರಲ್ಲಾ ಎಂದು ಹಲವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Police resign: ಯಾರದೋ ತಪ್ಪಿಗೆ ನನ್ನ ದಂಡಿಸಿದರಲ್ಲಾ : ಎಎಸ್ಪಿ ನಾರಾಯಣ ಭರಮನಿ ರಾಜೀನಾಮೆ ನಿರ್ಧಾರ – ಸಿಎಂ, ಗೃಹಸಚಿವರ ಮನವೊಲಿಕೆಗೆ ಜಗ್ಗದ ಭರಮನಿ