Home News ಹಸುಗೂಸಿನ ಮುಂದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೋಷಕರು | ಮಗುವಿನ ಸಮ್ಮುಖದಲ್ಲೇ ಮದುವೆಯಾಗಲು ಕಾರಣವಾದರೂ ಏನು??

ಹಸುಗೂಸಿನ ಮುಂದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೋಷಕರು | ಮಗುವಿನ ಸಮ್ಮುಖದಲ್ಲೇ ಮದುವೆಯಾಗಲು ಕಾರಣವಾದರೂ ಏನು??

Hindu neighbor gifts plot of land

Hindu neighbour gifts land to Muslim journalist

ಕೆಲವು ಮಕ್ಕಳಿಗೆ ತಮ್ಮ ತಂದೆ-ತಾಯಿ ಮದುವೆ ನೋಡಬೇಕೆಂಬ ಹುಚ್ಚು ಆಸೆ ಇರುತ್ತದೆ. ಕೆಲವರು ಅದನ್ನು ಈಡೇರಿಸಲು ಮದುವೆಯ ವಾರ್ಷಿಕೋತ್ಸವದಂದು ತಂದೆ-ತಾಯಿಗಳಿಗೆ ಪುನರ್ವಿವಾಹ ಮಾಡಿಸುವುದುಂಟು. ಆದರೆ ಮದುವೆಯ ಮುಂಚೆ ಹುಟ್ಟಿದ ಮಗುವಿನ ಮುಂದೆಯೇ ತಂದೆ-ತಾಯಿ ಮದುವೆಯಾದ ಘಟನೆಯೊಂದು ಎಲ್ಲರನ್ನು ಆಶ್ಚರ್ಯಗೊಳಿಸಿದೆ. ಈ ಘಟನೆ ತಮಿಳುನಾಡಿನ ಕುಡಲ್ಲೋರು ಊರಿನಲ್ಲಿ ನಡೆದಿದೆ.

ವೆಲ್ಮುರುಗನ್ ಯುವತಿಯನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದ. ಆದರೆ ಈ ವಿಷಯ ತಿಳಿದ ನಂತರ ಮೋಸ ಮಾಡಿ ಆಕೆಯಿಂದ ದೂರವಾಗಿದ್ದ. ಆದರೆ ಮಗು ಜನಿಸಿದ ನಂತರ ಪೊಲೀಸರ ಭಯಕ್ಕೆ ಕೊನೆಗೂ ಯುವತಿಯನ್ನು ಮದುವೆಯಾಗಿದ್ದಾನೆ.

ಈ ಜೋಡಿ ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ತುಂಬಾನೇ ಪ್ರೀತಿಸುತ್ತಿದ್ದರು. ಮದುವೆಯಾಗುತ್ತೇನೆ ಎಂದು ಹೇಳಿ ವೆಲ್ಮುರುಗನ್ ಲೈಂಗಿಕ ಸಂಪರ್ಕ ಕೂಡ ನಡೆಸಿದ್ದನು. ಅದರ ಫಲವಾಗಿ ಯುವತಿ ಗರ್ಭವತಿಯಾಗಿದ್ದಾಳೆ. ಅದಾದ ನಂತರ ವೆಲ್ಮುರುಗನ್ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಯುವತಿ ಆತನ ಮನೆಗೆ ಹೋಗಿ ಗಲಾಟೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಆಕೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಬೇಕಾಯಿತು.

ನಂತರ ಯುವತಿ ಒಂಭತ್ತು ತಿಂಗಳು ನೋವಿನಲ್ಲೇ ಕಳೆದು ಗಂಡು ಮಗುವನ್ನು ಹೆತ್ತಳು. ಆಸ್ಪತ್ರೆಯಲ್ಲಿ ಮಗುವಿನ ತಂದೆಯ ಹೆಸರು ಕೇಳಿದಾಗ, ಅವಳು ಅನಿವಾರ್ಯವಾಗಿ ವೆಲ್ಮುರುಗನ್ ಹೆಸರು ಹೇಳಬೇಕಾಯ್ತು. ಜೊತೆಗೆ ತಾನು ಅನುಭವಿಸಿದ ನೋವನ್ನು ಕೂಡ ನರ್ಸ್ ಬಳಿ ಯುವತಿ ಹೇಳಿಕೊಂಡಿದ್ದಳು.

ಆಗ ಈ ವಿಚಾರವಾಗಿ ನರ್ಸ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೆಲ್ಮುರುಗನ್‍ಗೆ ಕಿವಿ ಮಾತು ಹೇಳಿದ್ದಾರೆ. ಆಗ ಜೈಲಿಗೆ ಹೋಗುವ ಭಯಕ್ಕೋ, ತಪ್ಪಿನ ಅರಿವಾಗಿಯೋ ವೆಲ್ಮುರುಗನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಹಸುಗೂಸಿನ ಮುಂದೆಯೇ ಇಬ್ಬರೂ ಮದುವೆಯಾಗಿದ್ದಾರೆ.