

Karawara: ಪೋಷಕರ ನಿರ್ಲಕ್ಷ್ಯದಿಂದ ಆಟವಾಡುತ್ತಿದ್ದ ಎರಡು ವರ್ಷದ ಹೆಣ್ಣು ಮಗುವೊಂದು ನಾಲೆಗೆ ಬಿದ್ದು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ.
ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗು ಶನಿವಾರ ಮಧ್ಯಾಹ್ನದ ಸಮಯದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಎದುರಿಗಿದ್ದ ಕಾಲುವೆ ಹೋಗಿ ಬಿದ್ದು, ಸಾವಿಗೀಡಾಗಿದೆ. ಕೂಡಲೇ ಸ್ಥಳೀಯರು ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವಿಗೀಡಾಗಿದೆ.
ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.













