Home News Kantara: ಗಣೇಶ ವಿಗ್ರಹಕ್ಕೆ ಪಂರ್ಜುಲಿ ದೈವದ ವೇಷ; ಕರಾವಳಿಗರಲ್ಲಿ ಭುಗಿಲೆದ್ದ ಆಕ್ರೋಶ

Kantara: ಗಣೇಶ ವಿಗ್ರಹಕ್ಕೆ ಪಂರ್ಜುಲಿ ದೈವದ ವೇಷ; ಕರಾವಳಿಗರಲ್ಲಿ ಭುಗಿಲೆದ್ದ ಆಕ್ರೋಶ

Kantara

Hindu neighbor gifts plot of land

Hindu neighbour gifts land to Muslim journalist

Kantara: ರಿಷಬ್‌ ಶೆಟ್ಟಿ ಅವರ ಕಾಂತರ ಸಿನಿಮಾ ಬಂದ ಮೇಲೆ ದೈವಗಳ ಮೇಲಿನ ನಂಬಿಕೆ ಹೆಚ್ಚಿದೆ. ಕರಾವಳಿಯಲ್ಲಿ ದೈವಗಳ ಆರಾಧನೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವಂತಹ ಪದ್ಧತಿ.

ಕಾಂತಾರ ಸಿನಿಮಾ ಬಂದ ಮೇಲಂತೂ ದೈವಗಳ ವಿಚಾರವಾಗಿ ಹಾಸ್ಯಾಸ್ಪದವಾಗಿ ವರ್ತನೆ ಮಾಡುವವರ ವಿರುದ್ಧ ತುಳುನಾಡಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಈ ಕುರಿತು ಅನೇಕ ವರದಿಗಳೂ ಆಗಿದೆ. ಆದರೆ ಈ ವರ್ತನೆ ಇನ್ನೂ ಮುಗಿಯುವುದಿಲ್ಲವೇನೋ? ಏಕೆಂದರೆ ಮುಂಬಯಿಯಲ್ಲಿನ ಗಣೇಶ್‌ ಚತುರ್ಥಿ ಹಬ್ಬಕ್ಕೆಂದು ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಂಜುರ್ಲಿ ದೈವ ಲುಕ್‌ಗೆ ಗಣೇಶನ ಸೊಂಡಿಲು ಕೂರಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕರಾವಳಿ ಭಾಗದ ಜನರು ಇದನ್ನು ಕಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂರ್ತಿಯನ್ನು ಮಹಾರಾಷ್ಟ್ರದಲ್ಲಿ ಕೋಪರ್ಖೈರನೆನಲ್ಲಿ ಸಿದ್ಧಪಡಿಸಲಾಗಿದ್ದು, ವಿನಾಯಕ ಪಗಾರೆ ಆರ್ಟ್‌ ವರ್ಕ್‌ ಈ ವೀಡಿಯೋ ಹಂಚಿಕೊಂಡಿದ್ದಾರೆ.