Home News Pahalgam Terror Attack: ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದ್ರೂ ಹೊಲಸು ತಿನ್ನೋದನ್ನು ಬಿಡಲ್ಲ’

Pahalgam Terror Attack: ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದ್ರೂ ಹೊಲಸು ತಿನ್ನೋದನ್ನು ಬಿಡಲ್ಲ’

Hindu neighbor gifts plot of land

Hindu neighbour gifts land to Muslim journalist

Pahalgam Terror Attack: “ಹಂದಿಗೆ ಲಿಪ್‌ಸ್ಟಿಕ್ ಹಚ್ಚಿದ್ರೂ ಅದು ಹೊಲಸು ತಿನ್ನುವ ತನ್ನ ಸ್ವಾಭಾವಿಕ ಬುದ್ಧಿ ಬಿಡುವುದಿಲ್ಲ” ಎಂದು ಹೇಳುವ ಮೂಲಕ ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಮೈಕೆಲ್ ರುಬಿನ್ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.

ಪಹಲ್ಗಾಮ್ ದಾಳಿಯನ್ನು ಖಂಡಿಸಿ ರುಬಿನ್ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. “ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಕುಮ್ಮಕ್ಕಿನಿಂದಲೇ ಈ ದಾಳಿ ನಡೆದಿದೆ,” ಎಂದು ಆರೋಪಿಸಿದ ಅವರು, ಪಾಕ್ ಸೇನಾ ಮುಖ್ಯಸ್ಥರನ್ನು ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಕೆ ಮಾಡಿ ಕುಟುಕಿದರು.

“ಒಸಾಮಾ ಬಿನ್ ಲಾಡೆನ್ ಗುಹೆಯಲ್ಲಿ ಅಡಗಿಕೊಂಡಿದ್ದರೆ, ಮುನೀರ್ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರೂ ಒಂದೇ ಮನಸ್ಥಿತಿ ಯುಳ್ಳವರಾಗಿದ್ದು, ಅವರ ಅಂತ್ಯವೂ ಒಂದೇ ಆಗಬೇಕು,” ಎಂದು ರುಬಿನ್ ಹೇಳಿದರು.