Home News Dharmasthala Case: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ಪದ್ಮಲತಾ, ಮರು ತನಿಖೆಗೆ ಸಹೋದರಿಯಿಂದ SIT ಗೆ ದೂರು ದಾಖಲು

Dharmasthala Case: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ಪದ್ಮಲತಾ, ಮರು ತನಿಖೆಗೆ ಸಹೋದರಿಯಿಂದ SIT ಗೆ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

Dakshina Kannada: ಧರ್ಮಸ್ಥಳದಲ್ಲಿ ಶವವಾಗಿ ಸಿಕ್ಕಿದ್ದ ಪದ್ಮಲತಾ ಕೇಸ್‌ ಮರು ತನಿಖೆ ಮಾಡಿ ಎಂದು ಅವರ ಸಹೋದರಿ ಎಸ್‌ಐಟಿ ದೂರು ಸಲ್ಲಿಕೆ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ಪದ್ಮಲತಾ ಅಸಹಜ ಸಾವು ಪ್ರಕರಣದ ಕುರಿತು ಮರು ತನಿಖೆಗೆ ಆಗ್ರಹಿಸಿ ಅವರ ಸಹೋದರಿ ಎಸ್‌ಐಟಿಗೆ ದೂರು ಸಲ್ಲಿಸಿ ಮರು ತನಿಖೆಗೆ ಆಗ್ರಹಿಸಿದ್ದಾರೆ.

38 ವರ್ಷಗಳ ಹಿಂದೆ ಅಸಹಜವಾಗಿ ಸಾವನ್ನಪ್ಪಿರುವ ಪದ್ಮಲತಾ ಕೊಲೆ ಕೇಸ್‌ ಮರು ತನಿಖೆಗೆ ಆಗ್ರಹ ಮಾಡಿದ್ದಾರೆ. ಎಸ್‌ಐಟಿ ಕಚೇರಿಗೆ ಬಂದ ಪದ್ಮಲತಾ ಸಹೋದರಿ ಇಂದ್ರಾವತಿ ದೂರಿನ ಅರ್ಜಿ ನೀಡಿದ್ದು, ತನಿಖೆಗೆ ಆಗ್ರಹ ಮಾಡಿದ್ದಾರೆ. ನೇತ್ರಾವತಿ ನದಿ ತೀರದಲ್ಲಿ ಪದ್ಮಲತಾ ಕೊಳೆತ ಸ್ಥಿತಿಯಲ್ಲಿ 38 ವರ್ಷಗಳ ಹಿಂದೆ ಪತ್ತೆಯಾಗಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬೋಳಿಯಾರ್‌ ನಿವಾಸಿ ಪದ್ಮಲತಾ ಸಹೋದರಿ ಇಂದ್ರಾವತಿ ಅವರು ಪ್ರಕರಣದ ಕುರಿತು ಮರು ತನಿಖೆ ಆಗಬೇಕೆಂದು ದೂರು ಸಲ್ಲಿಸಿದ್ದಾರೆ.

D K Shivakumar: ರಾಹುಲ್‌ ಗಾಂಧಿಗೆ ನೋಟಿಸ್‌ ನೀಡಲು ಚುನಾವಣಾ ಆಯೋಗದವರು ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್‌