Home National ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಭೂಷಣ’ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಮಾಜಿ ಸಿ.ಎಂ!!

ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಭೂಷಣ’ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಮಾಜಿ ಸಿ.ಎಂ!!

Hindu neighbor gifts plot of land

Hindu neighbour gifts land to Muslim journalist

ಹಿರಿಯ ಸಿಪಿಎಂ ಮುಖಂಡ ಮತ್ತು ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಲಭಿಸಿದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸ್ವೀಕರಿಸಲು ನಿರಾಕರಿಸಿದ್ದಾರೆ.

ಗಣರಾಜ್ಯೋತ್ಸವದ ಮುನ್ನಾ ದಿನದಂದು ಕೇಂದ್ರ ಸರಕಾರ ಪದ್ಮ ಪ್ರಶಸ್ತಿಯನ್ನು ಪಡೆದವರ ಹೆಸರನ್ನು ಪ್ರಕಟಿಸಿತ್ತು. ಗೃಹಸಚಿವಾಲಯ ಬಿಡುಗಡೆ ಮಾಡಿದ ಈ ಪಟ್ಟಿಯ ಪ್ರಕಾರ 73 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಸರಕಾರ ಘೋಷಿಸಿದ 17 ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಲ್ಲಿ ಭಟ್ಟಾಚಾರ್ಜಿ ಒಬ್ಬರು.

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ತಿರಸ್ಕರಿಸಿದ ಅವರು, ಈ ಪ್ರಶಸ್ತಿ ಬಗ್ಗೆ ನನಗೇನೂ ತಿಳಿದಿಲ್ಲ. ಯಾರೂ ಈ ಬಗ್ಗೆ ನ‌ನಗೆ ಏನೂ ಹೇಳಿಲ್ಲ. ಪದ್ಮಭೂಷಣ ಪ್ರಶಸ್ತಿ ನೀಡಲು ನಿರ್ಧರಿಸಿದರೆ ನಾನು ಸ್ವೀಕರಿಸಲು ನಿರಾಕರಿಸುತ್ತೇನೆ ಎಂದು ಹಿರಿಯ ರಾಜಕಾರಣಿ ಹೇಳಿದ್ದಾರೆ.

ಪ್ರಸ್ತುತ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಭಟ್ಟಾಚಾರ್ಯ ಅವರು ನರೇಂದ್ರ ಮೋದಿ ಸರಕಾರದ ಕಟು ಟೀಕಾಕರರಲ್ಲಿ ಒಬ್ಬರಾಗಿದ್ದು, ಸಿಪಿಐಎಂ ಪಾಲಿಟ್ ಬ್ಯೂರೊ ಸದಸ್ಯರಾಗಿದ್ದಾರೆ.