Home News Congress: ಆಪರೇಷನ್‌ ಸಿಂಧೂ‌ರ್ : ತಿರಂಗಾ ಯಾತ್ರೆ ಮೂಲಕ ಸೇನೆಗೆ ಬೆಂಬಲ ಸೂಚಿಸಿದ ರಾಜ್ಯ ಸರ್ಕಾರ!

Congress: ಆಪರೇಷನ್‌ ಸಿಂಧೂ‌ರ್ : ತಿರಂಗಾ ಯಾತ್ರೆ ಮೂಲಕ ಸೇನೆಗೆ ಬೆಂಬಲ ಸೂಚಿಸಿದ ರಾಜ್ಯ ಸರ್ಕಾರ!

Hindu neighbor gifts plot of land

Hindu neighbour gifts land to Muslim journalist

Congress: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕ್ ವಿರುದ್ಧ ಆಪರೇಷನ್‌ ಸಿಂಧೂ‌ರ್ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸುವ ಹಿನ್ನಲೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಂದು ನಗರದಾದ್ಯಂತ ತಿರಂಗಾ ಯಾತ್ರೆಯನ್ನು ನಡೆಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಬಳಿಯ ಕೆಆರ್ ವೃತ್ತದಿಂದ ಮಿನ್ಸ್‌ ಚೌಕದವರೆಗೆ ತಿರಂಗಾ ಯಾತ್ರೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವ‌ರ್, ನಾವೆಲ್ಲರೂ ಭಾರತೀಯ ಸೇನೆಯೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಕಳುಹಿಸಲು ಬಯಸುತ್ತೇವೆ. ನೀವು ಯಾವುದೇ ಕ್ರಮ ಕೈಗೊಂಡಿದ್ದರೂ ಅದನ್ನು ಪ್ರಶಂಸಿಸಲಾಗುತ್ತದೆ ಹಾಗೂ ಬೆಂಬಲ ಸೂಚಿಸುತ್ತೇವೆ. ಅದನ್ನು ಸಾಂಕೇತಿಕವಾಗಿ ಹೇಳಲು ಈ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.