Home News Online shopping: ಸ್ವಿಗ್ಗಿ, ಜೊಮ್ಯಾಟೋನಲ್ಲಿ ಮದ್ಯ ಮಾರಾಟಕ್ಕೆ ಶಿಫಾರಸ್ಸು ಸಲ್ಲಿಕೆ: ಈ ಷರತ್ತು ಅನ್ವಯ!

Online shopping: ಸ್ವಿಗ್ಗಿ, ಜೊಮ್ಯಾಟೋನಲ್ಲಿ ಮದ್ಯ ಮಾರಾಟಕ್ಕೆ ಶಿಫಾರಸ್ಸು ಸಲ್ಲಿಕೆ: ಈ ಷರತ್ತು ಅನ್ವಯ!

Hindu neighbor gifts plot of land

Hindu neighbour gifts land to Muslim journalist

Online shopping: ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು BEVCO (Kerala State Beverages Corporation) ಕೇರಳ ರಾಜ್ಯದಲ್ಲಿ ನಿರ್ಧರಿಸಿದೆ. ಈ ಸಂಬಂಧ ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಸರ್ಕಾರಕ್ಕೆ ವಿವರವಾದ ಶಿಫಾರಸ್ಸು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಆದಾಯ ಹೆಚ್ಚಿಸುವ ಉದ್ದೇಶದಿಂದ ಷರತ್ತುಗಳಿಗೆ ಒಳಪಟ್ಟು ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕಂಪನಿ ಯೋಜಿಸುತ್ತಿದೆ ಎಂದು ವರದಿಯಾಗಿದೆ

ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ
ಆನ್‌ಲೈನ್ ಮದ್ಯ ಮಾರಾಟಕ್ಕಾಗಿ ಬೆವ್ಕೊ ಈಗಾಗಲೇ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಸಿದ್ಧಪಡಿಸಿದೆ. ಸ್ವಿಗ್ಗಿ ಸೇರಿದಂತೆ ಆನ್‌ಲೈನ್ ವಿತರಣಾ ವೇದಿಕೆಗಳು ಆಸಕ್ತಿ ವ್ಯಕ್ಪಡಿಸಿವೆ ಎಂದು ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಮಾಹಿತಿ ನೀಡಿದ್ದಾರೆ

ಮದ್ಯ ಖರೀದಿಗೆ ಒಂದಿಷ್ಟು ಷರತ್ತು!
23 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಆನ್‌ಲೈನ್‌ನಲ್ಲಿ ಮದ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಮದ್ಯವನ್ನು ಖರೀದಿಸುವ ಮೊದಲು ವಯಸ್ಸಿನ ಪುರಾವೆಯನ್ನು ಒದಗಿಸಬೇಕು. ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಜೊತೆಗೆ ಕಡಿಮೆ ಪವರ್ ಹೊಂದಿರುವ ಮದ್ಯವನ್ನು ಬಿಡುಗಡೆ ಮಾಡಲು ಬೆವ್ಕೊ ಶಿಫಾರಸು ಮಾಡಿದೆ

ಹೊಸ ನಿರ್ಧಾರವು ಆಲ್ಕೋಹಾಲ್ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರವಾಸಿಗರನ್ನು ಒಳಗೊಂಡಂತೆ ಕಡಿಮೆ ಪವರ್ ಹೊಂದಿರುವ ಮದ್ಯವನ್ನು ಬಿಡುಗಡೆ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಬೆವ್ಕೊ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿದೇಶಿ ನಿರ್ಮಿತ ಬಿಯರ್ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಬೆವ್ಕೊ ಮನವಿಯನ್ನು ಸಹ ಮಾಡಿಕೊಂಡಿದೆ.