Home News Online Marriage: ಪಾಕ್ ಯುವತಿಯನ್ನು ಮದುವೆಯಾದ ಬಿಜೆಪಿ ನಾಯಕನ ಮಗ !! ಮದುವೆಯಾದದ್ದು ಎಲ್ಲಿ ಅಂತ...

Online Marriage: ಪಾಕ್ ಯುವತಿಯನ್ನು ಮದುವೆಯಾದ ಬಿಜೆಪಿ ನಾಯಕನ ಮಗ !! ಮದುವೆಯಾದದ್ದು ಎಲ್ಲಿ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!!

Hindu neighbor gifts plot of land

Hindu neighbour gifts land to Muslim journalist

Online Marriage: ರಾಜತಾಂತ್ರಿಕ ಬಿಕ್ಕಟ್ಟು, ಉಗ್ರವಾದದಂತಹ ಗಂಭೀರ ಸಮಸ್ಯೆಗಳ ಕಾರಣದಿಂದಾಗಿ ಒಂದೆಡೆ ಭಾರತ ಹಾಗೂ ಪಾಕಿಸ್ತಾನ ಮತ್ತು ಭಾರತ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ, ಉಭಯ ದೇಶಗಳ ವದು ಹಾಗೂ ವರರಲ್ಲಿ ಪ್ರೀತಿ ಮೂಡುವ, ಮದುವೆಯಾಗುವ ವಿಚಾರಗಳು ಸಖತ್ ಸುದ್ದಿಯಾಗುತ್ತಿವೆ. ಈ ನಡುವೆಯೇ ಇದೀಗ ಪಾಕ್ ಯುವತಿಯೊಂದಿಗೆ ಬಿಜೆಪಿ ನಾಯಕ ಮಗನ ಮುದವೆ ಆಗಿದೆ. ಮದುವೆ ಆಗಿದ್ದೆಲ್ಲಿ ಅಂತ ಗೊತ್ತಾದ್ರೆ ಮಾತ್ರ ನೀವೇ ಶಾಕ್ ಆಗ್ತೀರಾ!!

ಹೌದು, ಉತ್ತರ ಪ್ರದೇಶದ(Uttar Pradesh) ಜೌನ್‌ಪುರ ಜಿಲ್ಲೆಯ ನಿವಾಸಿ ಹಾಗೂ ಬಿಜೆಪಿ ಕಾರ್ಪೊರೇಟರ್‌ ತೆಹಸಿನ್‌ ಶಾಹಿದ್‌ ಅವರ ಪುತ್ರ ಮೊಹಮ್ಮದ್‌ ಅಬ್ಬಾಸ್‌ ಮದುವೆಯಾಗಿದ್ದಾರೆ. ಆದರೆ ಇವರು ಮದುವೆ ಆಗಿದ್ದು ಮಾತ್ರ ಆನ್ಲೈನ್ ಅಲ್ಲಿ. ವಿಸಾ ವಿಳಂಬವಾಗಿದ್ದಕ್ಕೆ ಇವರು ಆನ್ಲೈನ್ ಅಲ್ಲೇ ಮದುವೆ(Online Marriage) ಆಗಿದ್ದಾರೆ.

ವರದಿಗಳ ಪ್ರಕಾರ ಮೊಹಮ್ಮದ್‌ ಅಬ್ಬಾಸ್‌(Mohammad Abbas) ಅವರ ಮದುವೆಯನ್ನು ಪಾಕಿಸ್ತಾನದಲ್ಲಿ(Pakisthan) ನೆಲೆಸಿರುವ ತಮ್ಮ ಸಂಬಂಧಿಕರ ಪುತ್ರಿ ಅಂದಲೀಬ್‌ ಜಹಾರ್‌ ಅವರೊಂದಿಗೆ ಕಳೆದ ವರ್ಷವೇ ನಿಶ್ಚಯ ಮಾಡಲಾಗಿತ್ತು. ವರನ ಕುಟುಂಬ ವೀಸಾಗಾಗಿ ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಆದರೆ ಈ ವರೆಗೂ ವೀಸಾ ದೊರೆತಿಲ್ಲ. ವಧುವಿನ ತಾಯಿ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಆರೋಗ್ಯ ಬಿಗಡಾಯಿಸಿದ್ದರಿಂದ ತಮ್ಮ ಮಗಳ ಮದುವೆ ನೋಡಲು ಬಯಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಎರಡೂ ಕುಟುಂಬಳು ಆನ್‌ಲೈನ್‌ನಲ್ಲಿಯೇ ಮದುವೆ ಮಾಡಲು ನಿರ್ಧರಿಸಿದರು.

ಇನ್ನು ವರ ಹಾಗೂ ಅವರ ಕುಟುಂಬದವರು, ಅತಿಥಿಗಳು ಶುಕ್ರವಾರ ‘ಇಮಾಂಬರ’ಕ್ಕೆ (ಶಿಯಾ ಸಮುದಾಯದವರ ಪವಿತ್ರ ಮಂದಿರ) ತಲುಪಿದ್ದರು. ಆನ್‌ಲೈನ್‌ ಮೂಲಕವೇ ನಡೆದ ಮದುವೆಯನ್ನು ಅವರೆಲ್ಲ ಟಿವಿ ಸ್ಕ್ರೀನ್‌ ಮೂಲಕ ಕಣ್ತುಂಬಿಕೊಂಡು, ನವ ದಂಪತಿಗೆ ಹಾರೈಸಿದ್ದಾರೆ. ಸಮಾರಂಭಕ್ಕೆ ಜಿಲ್ಲೆಯ ಬಿಜೆಪಿ ನಾಯಕರೂ ಬಂದಿದ್ದರು. ಬಳಿಕ, ಅದ್ದೂರಿ ಭೋಜನಕೂಟ ನಡೆದಿದೆ. ಮದುವೆಯಾದ ನಂತರ ಹೈದರ್‌ ಅವರು, ತಮ್ಮ ಪತ್ನಿಗೆ ಕೂಡಲೇ ವೀಸಾ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.