

Onion: ಗೃಹಿಣಿಯರು ಈರುಳ್ಳಿ (Onion) ಹಾಕದೇ ಅಡುಗೆ ಮಾಡುವುದೇ ಇಲ್ಲ. ಹೌದು, ಯಾವುದೇ ಅಡುಗೆ ಮಾಡಲಿ ಅನೇಕ ಮಂದಿ ಈರುಳ್ಳಿ ಉಪಯೋಗಿಸುತ್ತಾರೆ. ಸಸ್ಯಾಹಾರ ಅಥವಾ ಮಾಂಸಾಹಾರ ಯಾವುದೇ ರೀತಿಯ ಅಡುಗೆ ಮಾಡಿದರೂ ಎಲ್ಲದಕ್ಕೂ ಈರುಳ್ಳಿ ಬಳಸಲಾಗುತ್ತದೆ. ಅದರಲ್ಲೂ ಹೆಚ್ಚಾಗಿ ಬಜ್ಜಿ, ಪಕೋಡ, ಫ್ರೈಸ್, ಮಾಂಸ, ಮೀನು, ಮೊಟ್ಟೆ ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಈರುಳ್ಳಿಯನ್ನು ಉಪಯೋಗಿಸಲಾಗುತ್ತದೆ.
ಆದ್ರೆ ಈರುಳ್ಳಿ ವೆಜ್ಜೋ ಅಥವಾ ನಾನ್ವೆಜ್ಜೋ? ಎಂಬ ಬಗ್ಗೆ ಗೊಂದಲವಿದ್ದರೆ ಇಲ್ಲಿದೆ ನೋಡಿ ಉತ್ತರ.
ಹಿಂದಿನ ಕಾಲದಿಂದಲೂ ಈರುಳ್ಳಿಯನ್ನು ಮಾಂಸಾಹಾರಿ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಏಕೆಂದರೆ ಇದನ್ನು ಮಾಂಸಾಹಾರಿ ಭಕ್ಷ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈರುಳ್ಳಿಯನ್ನು ತರಕಾರಿ ವರ್ಗಕ್ಕೆ ಸೇರಿಸಲಾಗಿದ್ದರೂ, ಅವು ಮಾಂಸಾಹಾರಿ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ.













