Home News Puttur: ಪಿ ಎಂ ಶ್ರೀ ಶಾಲೆ ವೀರಮಂಗಲದಲ್ಲಿ ಆಟಿಯಲ್ಲಿ ಒಂದು ದಿನ ಕಾರ್ಯಕ್ರಮ!

Puttur: ಪಿ ಎಂ ಶ್ರೀ ಶಾಲೆ ವೀರಮಂಗಲದಲ್ಲಿ ಆಟಿಯಲ್ಲಿ ಒಂದು ದಿನ ಕಾರ್ಯಕ್ರಮ!

Hindu neighbor gifts plot of land

Hindu neighbour gifts land to Muslim journalist

Puttur: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಪಿಎಂಶ್ರೀ ಸಮುದಾಯದ ಭಾಗಿತ್ವ ಕಾರ್ಯಕ್ರಮದಡಿ ಇಕೋಕ್ಲಬ್, ಸ್ಕೌಟ್ & ಗೈಡ್,ಸಾಹಿತ್ಯ ಕ್ಲಬ್ ಸೇವಾದಳ, ಸಾಂಸ್ಕೃತಿಕ ಕ್ಲಬ್ ಆಯೋಜಿಸಿದ ತುಳು ನಾಡಿನ ಸಂಸ್ಕೃತಿಗಳ ಪರಿಚಯವನ್ನು ಮಾಡುವ ಉದ್ದೇಶದಿಂದ ಸಂಪನ್ಮೂಲ ವ್ಯಕ್ತಿಗಳಿಂದ ಮಾತುಕತೆ, ತುಳುನಾಡಿನ ಆಷಾಡ ಮಾಸದ ತಿನಿಸುಗಳು, ಹಾಗೂ ತುಳುನಾಡ ಬಲಿಯೇಂದ್ರೆ ಎಂಬ ಯಕ್ಷಗಾನ ತಾಳಮದ್ದಳೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಣೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಇವರು ನೆರವೇರಿಸಿದರು.

ಟಾಸೆ ಡೋಳು ಬಾರಿಸಿ ತುಳು ಸಂಸ್ಕೃತಿಯನ್ನು ಉದ್ಘಾಟಿಸಿ ಮಾತನಾಡಿದ ರಾಕೇಶ್ ರೈ ಕೆಡೆಂಜಿ ಯವರು ತುಳುನಾಡು ಉತ್ತರದ ಬಾರ್ಕೂರಿನಿಂದ ಕಾಸರಗೋಡಿನ ತನಕ ವ್ಯಾಪಿಸಿದೆ. ಇಲ್ಲಿಯ ಆಚರಣೆಗಳು, ಇಲ್ಲಿನ ಜನರ ಪ್ರೀತಿ, ನಂಬಿಕೆಗಳು, ಆರಾದನೆಗಳು, ಜಾಗತೀಕರಣದ ಜಂಜಾಟದಲ್ಲಿ ಬದುಕು ಮರೆಯಾಗಿ ಯಾಂತ್ರಿಕತೆಗೆ ವಾಲುತ್ತಿರುವ ದಿನಮಾನಗಳಲ್ಲಿ ತುಳು ಸಂಸ್ಕೃತಿಯ ಬದುಕು ಕಟ್ಟಿಕೊಳ್ಳುವ ಕಾಯಕ ಶಾಲೆಗಳಲ್ಲಿ ಆಗುತ್ತಿರುವುದು ಸ್ತುತ್ಯಾರ್ಹ್ಯ ಎಂದರು.

ಶಾಲೆಯಲ್ಲಿ ಸಿದ್ಧ ಗೊಳಿಸಿದ ತುಳು ಆಹಾರ ಖಾದ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಭಾಗ್ಯೇಶ್ ರೈ ಯವರು ಆಹಾರಗಳು ಮನುಷ್ಯನ ಮೇಲೆ ವಿಶೇಷವಾದ ಪರಿಣಾಮ ಬೀರುತ್ತದೆ. ತುಳುವರು ತಿನ್ನುವ ಆಹಾರದ ರುಚಿ ಮತ್ತು ರೋಗ ನಿರೋದಕ ಶಕ್ತಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಈ ಶಾಲಾ ಮಕ್ಕಳಿಗೆ ಈ ಆಟಿಕೂಟ ಮರೆಯಲಾರದ ಸಂಗತಿ ಎಂದರು.

ತುಳು ಸಾಹಿತ್ಯದ ಬಗ್ಗೆ ಮಾತನಾಡಿದ ಉಮಾಪ್ರಸಾದ್ ರೈ ಇವರು ನೂರಾರು ಕವಿಗಳು ತುಳು ಸಾಹಿತ್ಯದ ಬೆಳವಣಿಗೆಗೆ ದುಡಿದಿದ್ದಾರೆ. ತುಳು ನಮ್ಮ ರಾಜ್ಯದ ಎರಡನೆ ಭಾಷೆಯಾಗಬೇಕು ಎನ್ನುವ ಪ್ರಯತ್ನ ನಮ್ಮದಾಗಬೇಕು .ಶಾಲೆಗಳಲ್ಲಿ ತುಳು ಭಾಷೆಯಾಗಿ ಪರಿಚಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ತುಳು ಪ್ರೇಮ ಹುಟ್ಟಿಸುತ್ತದೆ ಎಂದರು.

ತುಳು ಭಾಷೆಗೆ ತನ್ನದೆ ಆದ ಲಿಪಿ ಹೊಂದಿದ್ದು ಶತಮಾನಗಳ ಇತಿಹಾಸ ಇದೆ. ತುಳು ಭಾಷೆ ಚಂದದ ಭಾಷೆ ಅದನ್ನು ಅಸ್ವಾದಿಸುವ ಕೆಲಸ ನಮ್ಮ ಶಾಲೆಯಲ್ಲಿ ಆಗಿರುವುದು ಸ್ತುತ್ಯಾರ್ಹ ಎಂದರು.

ತುಳು ಸಂಸ್ಕೃತಿಯಲ್ಲಿ ಬದುಕು ಇದೆ. ಸಾಮರಸ್ಯ ಇದೆ. ಜಾತಿ ಧರ್ಮಗಳ ತಡೆಯಿಲ್ಲದೆ ಇರುವ ಚೈತನ್ಯಯುತ ಭಾಷೆ ಎಂದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಸುರೇಶ್ ಗಂಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಶಾಲಾ ಮುಖ್ಯಗುರು ಮಾತೆಯರ ಸಮಿತಿಯ ಅಧ್ಯಕ್ಷರಾದ ಕಮಲ ಇವರು ಪೋಷಕರಿಗೆ‌ ಕೃತಜ್ಞತೆ ಅರ್ಪಿಸಿದರು. ಶಾಲಾ ಮುಖ್ಯಗುರು ತಾರಾನಾಥ ಪಿ ಇವರು ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಶಿಕ್ಷಕರಾದ ಶೋಭಾ, ಕವಿತಾ,ಹೇಮಾವತಿ,ಶಿಲ್ಪರಾಣಿ, ಸೌಮ್ಯ,ಸವಿತಾ,ಸಂಚನಾ ಎಸ್ ಡಿ ಎಂ ಸಿ ಸದಸ್ಯರಾದ ನವ್ಯ,ಅರ್ಚನಾ,ವಿನುತ,ನಳಿನಿ,ಚಂದ್ರಾವತಿ,ಭವ್ಯ, ರಮೇಶ ಗೌಡ, ರಝಾಕ್, ಹರೀಶ ಮಣ್ಣಗುಂಡಿ, ಯೋಗೀಶ್, ಸಮೀರ್,ಉಪಸ್ಥಿತರಿದ್ದರು ಮಾಜಿ ಸದಸ್ಯರಾದ ರಾಜೇಶ್ವರಿ,ರತ್ನಾವತಿ,ಶಾಂಬಲತಾ ಲಿಂಗಪ್ಪ ಗೌಡ, ದಿನೇಶ್ ಶೆಟ್ಟಿ ಸಹಕರಿಸಿದರು. ವೇದಿಕೆಯಲ್ಲಿ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಶ್ರೀಪ್ರಕಾಶ್ ಪುತ್ತೂರು.‌ಕಲಾವಿದರಾದ ಗುಡ್ಡಪ್ಪ ಬಲ್ಯ,ಆನಂದ ಸವಣೂರು, ಉಮೇಶ್ ಸವಣೂರು, ಉಪಸ್ಥಿತರಿದ್ದರು. 84 ಮಂದಿ ಪೋಷಕರು 40 ವಿವಿಧ ನಮೂನೆಯ ತಿಂಡಿಗಳನ್ನು ತಯಾರಿಸಿದರು. ನೂರಾರು ಮಂದಿ ಎಲೆ ಊಟ ಮಾಡಿದರು. ಬಳಿಕ ಕಲಾವಿದರ ಕೂಡುವಿಕೆಯಲ್ಲಿ ತುಳುನಾಡ ಬಲಿಯೇಂದ್ರೆ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಚೆಂಡೆ ಮದ್ದಳೆಯಲ್ಲಿ ಮುರುಳೀಧರ ಕಲ್ಲೂರಾಯ ,ಶ್ರೀಪ್ರಕಾಶ್ ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ,ತಾರಾನಾಥ ಸವಣೂರು, ರಮೇಶ್ ಉಳಯ, ಅಚ್ಯುತ ಪಾಂಗಣ್ಣಾಯ,ಸೌಮ್ಯ ಸಹಕರಿಸಿದರು.