Home News ಒಂದೇ ಬೈಕ್ ನಲ್ಲಿ 5 ಮಹಿಳೆಯರು ಸೇರಿದಂತೆ 9 ಜನರ ಜಾಲಿ ರೈಡ್ | ಸೀಟ್...

ಒಂದೇ ಬೈಕ್ ನಲ್ಲಿ 5 ಮಹಿಳೆಯರು ಸೇರಿದಂತೆ 9 ಜನರ ಜಾಲಿ ರೈಡ್ | ಸೀಟ್ ವ್ಯವಸ್ಥೆ ನೋಡಿದರೆ ಆಶ್ಚರ್ಯಗೊಳ್ಳುವುದಂತೂ ಸತ್ಯ, ಇಲ್ಲಿದೆ ವೈರಲ್ ವಿಡಿಯೋ

Hindu neighbor gifts plot of land

Hindu neighbour gifts land to Muslim journalist

ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳಿಂದ ಜನರು ರೋಸಿ ಹೋಗಿದ್ದಾರೆ. ಏತನ್ಮಧ್ಯೆ ಪೆಟ್ರೋಲ್, ಡೀಸೆಲ್ ಅನ್ನು ಕಡಿಮೆ ಬಳಕೆ ಮಾಡುವಂತೆ ಕೆಲವು ಪರ್ಯಾಯ ವ್ಯವಸ್ಥೆಯನ್ನು ಜನರು ಕಂಡುಹಿಡಿಯುತ್ತಿದ್ದಾರೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವ ಹಾಗೆ ಕಾಣುತ್ತಿಲ್ಲ.

ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಒಂದೇ ರೈಡ್​ನಲ್ಲಿ ಸಾಧ್ಯವಾದಷ್ಟು ಜನರನ್ನು ಕರೆದುಕೊಂಡು ಬೈಕ್ ಸವಾರ ಹೊರಟಿದ್ದಾನೆ. ಬೈಕ್​ನಲ್ಲಿ ಕುಳಿತುಕೊಳ್ಳಲು ಸೀಟ್ ವ್ಯವಸ್ಥೆಯನ್ನು ಹೇಗೆ ಮಾಡಲಾಗಿದೆ ಎಂಬುದನ್ನು ನೋಡಿದರೆ ನೀವು ಆಶ್ಚರ್ಯಗೊಳ್ಳುವುದಂತೂ ನಿಜ.

ವಿಡಿಯೋದಲ್ಲಿ ಬೈಕ್ ಸವಾರನು ಬೈಕ್ ಓಡಿಸುತ್ತಿದ್ದಾನೆ. ರೆಕ್ಕೆಯಂತೆ ಎರಡು ಹಲಗೆಗಳನ್ನು ಬೈಕ್​ಗೆ ಜೋಡಿಸಲಾಗಿದೆ. ಆತನ ಹಿಂಬದಿಗೆ ಎರಡು ಜನ ಕುಳಿತಿದ್ದರೆ, ಜೋಡಿಸಲಾದ ಹಲಗೆಯ ಮೇಲೆ ಮತ್ತೊಂದಿಷ್ಟು ಜನರು ಕುಳಿತಿದ್ದಾರೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಒಂಭತ್ತು ಮಂದಿ ಕುಳಿತಿದ್ದಾರೆ. ರೆಕ್ಕೆಯುಳ್ಳ ವಿಮಾನ ಆಕಾಶದಲ್ಲಿ ಹಾರಾಡಿದರೆ ಬೈಕ್​ಗೆ ರೆಕ್ಕೆ ಕಟ್ಟಿ ರಸ್ತೆಯಲ್ಲಿ ಚಲಿಸುತ್ತಿದ್ದಾನೆ ಸವಾರ ಎಂಬ ಪ್ರತಿಕ್ರಿಯೆ ಕೇಳಿ ಬಂದಿದೆ.

ನಾವು ವಿಡಿಯೊದಲ್ಲಿ ಗಮನಿಸಿದರೆ ಐದು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಬೈಕ್​ನಲ್ಲಿ ಚಲಿಸುತ್ತಿರುವುದು ಕಂಡು ಬರುತ್ತದೆ. ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ಫುಲ್ ವೈರಲ್ ಆಗಿದೆ. ನಿರಂತರ ಪೆಟ್ರೋಲ್, ಡೀಸೆಲ್ ಬೆಲೆಗಳು ಏರುತ್ತಿರುವುದರಿಂದ ಈ ರೀತಿಯ ಪರ್ಯಾಯ ವ್ಯವಸ್ಥೆ ಅನಿವಾರ್ಯವೇ ಎಂದೆನಿಸುತ್ತಿದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ನಿಯಮ ಉಲ್ಲಂಘಿಸಿದ್ದಾರೆ ಮತ್ತು ಹೆಲ್ಮೆಟ್ ಇಲ್ಲದೇ ಅಷ್ಟೊಂದು ಜನ ಬೈಕ್​ನಲ್ಲಿ ಸಂಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಿಧಾನವಾಗಿ ಬೈಕ್ ಓಡಿಸಿ ಹೆಚ್ಚು ಕಡಿಮೆ ಆದೀತು ಎಂದು ಕೆಲವರು ಹೇಳಿದ್ದಾರೆ. ವಿಡಿಯೋಗೆ ನಾನಾ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.