Home News Ola Premium Plus Service: Ola ಪ್ರಯಾಣಿಕರೇ ನಿಮಗೊಂದು ಗುಡ್ ನ್ಯೂಸ್ ! Ola ಆರಂಭಿಸಿದೆ...

Ola Premium Plus Service: Ola ಪ್ರಯಾಣಿಕರೇ ನಿಮಗೊಂದು ಗುಡ್ ನ್ಯೂಸ್ ! Ola ಆರಂಭಿಸಿದೆ Premium Plus Service

Ola Premium Plus Service
Image source :The economic times

Hindu neighbor gifts plot of land

Hindu neighbour gifts land to Muslim journalist

Ola Premium Plus Service :ನಗರದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡೋದಕ್ಕೆ ಹೆಚ್ಚಿನವರು ಉಪಯೋಗಿಸೋದು ಓಲಾ  ಕ್ಯಾಬ್‌ಗಳನ್ನು. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಬುಕ್ ಮಾಡಿದರೆ ಸಾಕು ಕ್ಯಾಬ್ ಮನೆ ಮುಂದಿರುತ್ತದೆ. ಸೇಫಾಗಿ ಲೊಕೇಶನ್‌ಗೆ ತಲುಪಿಸುತ್ತದೆ. ಎಷ್ಟು ಸಮಯದಲ್ಲಿ ಬೇಕಾದರೂ ಕ್ಯಾಬ್‌ ಲಭ್ಯವಿರುತ್ತದೆ.

 

ಆದರೆ ಇಂಥಾ ಓಲಾನಿಂದಲೂ ಕೆಲವೊಮ್ಮೆ ತೊಂದರೆ ಆಗುತ್ತದೆ. ಕ್ಯಾಬ್ ಬುಕ್ ಮಾಡಿದ ಗಂಟೆಗಳ ಕಾಲ ಬಳಿಕವೂ ಬಾರದಿರುವುದು, ಲೊಕೇಶನ್‌ ತಿಳಿಯದೆ ಒದ್ದಾಡುವುದು, ರೈಡ್ ಕೊನೆಯಲ್ಲಿ ಎಕ್ಸ್‌ಟ್ರಾ ಬಿಲ್ ಪಾವತಿಸುವಂತಾಗುವುದು ಕೆಲವೊಮ್ಮೆ ನಡೆಯುತ್ತದೆ. ಇದಲ್ಲದೆ ಕೆಲವೊಮ್ಮೆ ಚಾಲಕರು (Drivers) ಕೊನೆ ಕ್ಷಣದಲ್ಲಿ ರೈಡ್ ಕ್ಯಾನ್ಸಲ್ ಮಾಡಿ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಾರೆ.

 

ಆದರೆ, ಇನ್ನು ಮುಂದೆ  ಈ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, OLA ತನ್ನ ವಿಶೇಷ ಸೇವೆಯನ್ನು ಪ್ರಾರಂಭಿಸಿದೆ. ಮೇ 29 ರಿಂದ ಈ ಸೇವೆ ಜಾರಿಗೆ ಬಂದಿದೆ. ಕಂಪನಿಯು ಓಲಾ ಪ್ರೀಮಿಯಂ ಪ್ಲಸ್ ಸೇವೆಯ (Ola Premium Plus Service) ಜಾರಿಗೆ ಮುಂದಾಗಿದೆ. ಬಳಕೆದಾರರು ಪ್ರೈಮ್ ಪ್ಲಸ್ ಮೂಲಕ ಕ್ಯಾಬ್ ಅನ್ನು ಬುಕ್ ಮಾಡಿದಾಗ, ಅವರಿಗೆ ‘ಅತ್ಯುತ್ತಮ ಚಾಲಕರನ್ನು ಒದಗಿಸಲಾಗುತ್ತದೆ. ಅಲ್ಲದೆ, ಈ ಸೇವೆಯ ಮೂಲಕ ಯಾವುದೇ  ಕ್ಯಾನ್ಸಲೇಶನ್ ಅಥವಾ  ಡ್ರೈವಿಂಗ್ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ.

 

ಸದ್ಯಕ್ಕೆ Ola ಪ್ರೀಮಿಯಂ ಪ್ಲಸ್ ಬೆಂಗಳೂರಿನ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಕ್ರಮೇಣ ಈ ಸೇವೆಯನ್ನು ದೇಶದಾದ್ಯಂತ ಹೊರತರುವ ಯೋಜನೆ ಕಂಪನಿಯದ್ದಾಗಿದೆ. ಈ ಸೇವೆಯನ್ನು ದೇಶಾದ್ಯಂತ ಬಿಡುಗಡೆ ಮಾಡುವ ಮೊದಲು ಕಂಪನಿಯು ಪ್ರತಿಕ್ರಿಯೆಯನ್ನು ನೋಡಲು ಬಯಸುತ್ತದೆ ಎಂದು ತಿಳಿಸಲಾಗಿದೆ.

 

ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ಮಾಡುವ ಮೂಲಕ ಕಂಪನಿಯ  ಯೋಜನೆಯ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ. “ಓಲಾ ಕ್ಯಾಬ್ಸ್‌ನಿಂದ ಹೊಸ ಪ್ರೀಮಿಯಂ ಸೇವೆಯನ್ನು ಪರೀಕ್ಷಿಸಲಾಗುತ್ತಿದೆ. ಪ್ರೈಮ್ ಪ್ಲಸ್‌ನಲ್ಲಿ ಅತ್ಯುತ್ತಮ ಚಾಲಕರು, ಉತ್ಕೃಷ್ಟ ದರ್ಜೆಯ ಕಾರುಗಳು, ಯಾವುದೇ ರದ್ದತಿ ಅಥವಾ ಕಾರ್ಯಾಚರಣೆಯ ತೊಂದರೆಗಳಿಲ್ಲ. ಮೇ 29, ಸೋಮವಾರದಿಂದ ಬೆಂಗಳೂರಿನಲ್ಲಿ ಆಯ್ದ ಗ್ರಾಹಕರಿಗೆ ಲೈವ್ ಆಗಲಿದೆ. ಇದನ್ನು ಪ್ರಯತ್ನಿಸಿ ನೋಡಿ. ನಾನು ಇದನ್ನು ಆಗಾಗ್ಗೆ ಬಳಸುತ್ತಿದ್ದೇನೆ ಮತ್ತು ನನ್ನ ಅನುಭವಗಳನ್ನು ಇಲ್ಲಿ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತೇನೆ,” ಎಂದು ಅವರು ತಿಳಿಸಿದ್ದಾರೆ.

 

ಓಲಾ ಸಿಇಒ ಭವಿಷ್‌ ಅಗರ್‌ವಾಲ್‌ ಅವರು ಕ್ಯಾಬ್ ಸೇವೆಯ ಸ್ಕ್ರೀನ್‌ಶಾಟ್‌ನ್ನೂ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಗ್ರೀನ್ ಸಿಟಿ ಸೂಪರ್‌ ಮಾರ್ಕೆಟ್‌ ಇಮ್ಮಡಿಹಳ್ಳಿಯಿಂದ ಅರಾಕು ಕಾಫಿ 12 ನೇ ಮುಖ್ಯ ರಸ್ತೆಗೆ ಕ್ಯಾಬ್‌ ಬುಕ್‌ ಮಾಡಿರುವುದು ಕಾಣಿಸುತ್ತಿದೆ.

 

ಈ ಸ್ಕ್ರೀನ್‌ಶಾಟ್‌ನ ಪ್ರಕಾರ, ‘ಮಿನಿ’ ಅಥವಾ ‘ಯಾವುದೇ ಕಾರ್ ಬುಕ್ ಮಾಡಿ’ ವರ್ಗಕ್ಕೆ ಹೋಲಿಸಿದರೆ ಪ್ರೈಮ್ ಪ್ಲಸ್ ಸೇವೆಯ ದರ ಕಡಿಮೆ ಇದೆ. ಪ್ರೈಮ್ ಪ್ಲಸ್ ಅಡಿಯಲ್ಲಿ ಗ್ರಾಹಕರು 455 ರೂ. ದರ ತೋರಿಸುತ್ತಿದ್ದರೆ, ಮಿನಿಕ್ಯಾಬ್ ಗ್ರಾಹಕರಿಗೆ 535 ರೂ. ಶುಲ್ಕ ಕಾಣಿಸುತ್ತಿದೆ. ಯಾವುದಾದರೂ ಕಾರು ವರ್ಗದ ಅಡಿಯಲ್ಲಿ 535 – 664 ರೂ. ನಡುವಿನ ದರ ಇದೆ.

 

ಇದನ್ನೂ ಓದಿ: Mount Everest: ಹಿಮಾಲಯದಲ್ಲಿ ಕಸವೋ ಕಸ, ಎವರೆಸ್ಟ್ ನಲ್ಲಿ ಕಸ ಕೆಡವಿ ಬಂದವರು ಯಾರು ? – ವೈರಲ್ ವಿಡಿಯೋ !