Home News Ullala: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು – ಇಡೀ ಗ್ರಾಮದ ಜೀವಜಲವೇ ವಿಷ!

Ullala: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು – ಇಡೀ ಗ್ರಾಮದ ಜೀವಜಲವೇ ವಿಷ!

Hindu neighbor gifts plot of land

Hindu neighbour gifts land to Muslim journalist

Ullala: ಪಜೀರು ಗ್ರಾಮದ ಮುಡಿಪು ಸಮೀಪದ ಸಾಂಬಾರ್‌ ತೋಟ ಪರಿಸರದ ಬಾವಿ, ಕೊಳವೆ ಬಾವಿಗಳಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿದ್ದು, ಕಲುಷಿತ ನೀರಿನಿಂದ ಸ್ಥಳೀಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ.

ಹೌದು, ಕುಡಿಯುವ ನೀರಿನಲ್ಲಿ ತೈಲಾಂಶ ಸೇರಿ ಗ್ರಾಮಸ್ಥರ ಪ್ರಾಣಕ್ಕೆ ಕುತ್ತಾಗಿದ್ದು, ಜೀವಜಲವೇ ವಿಷವಾಗಿ ಬದಲಾದ ಘಟನೆ ದ.ಕ(Dakshina Kannada)ಜಿಲ್ಲೆಯ ಉಳ್ಳಾಲ(Ullala) ತಾಲೂಕಿನ ಪಜೀರು ಗ್ರಾಮದ ಸಂಬಾರ ತೋಟ ಬಳಿ ನಡೆದಿದೆ. ಆರು ತಿಂಗಳ ಹಿಂದೆ ಒಂದು ಕೊಳವೆ ಬಾವಿಯಲ್ಲಿ ತೈಲ ಮಿಶ್ರಿತ ನೀರು ಕಂಡುಬಂದಿತ್ತು. ಇದೀಗ ಹತ್ತಾರು ಬಾವಿ, ಕೊಳವೆ ಬಾವಿಗಳ ನೀರಿನಲ್ಲಿ ಭಾರೀ ಪ್ರಮಾಣದ ತೈಲಾಂಶ ಪತ್ತೆಯಾಗಿದೆ.

ಅಷ್ಟೇ ಅಲ್ಲದೆ ಮುಡಿಪು ಪೇಟೆಯಿಂದ‌ ಸುಮಾರು 3 ಕಿ.ಮೀ ದೂರವಿರುವ ಸಂಬಾರ ತೋಟ ಪ್ರದೇಶ 100 ಮನೆಗಳಿದ್ದು, ಸುಮಾರು 10 ಕೊಳವೆ ಬಾವಿ ಹಾಗೂ ಕೆಲವು ಬಾವಿಗಳ ನೀರಿನಲ್ಲಿ ತೈಲ ಗೋಚರಿಸಿದೆ. ಡೀಸೆಲ್ ಮಾದರಿಯ ಭಾರೀ ಪ್ರಮಾಣದ ತೈಲದ ಅಂಶ ಪತ್ತೆಯಾಗಿದೆ. ತೈಲ ಮಿಶ್ರಿತ ನೀರು ಸೇವಿಸಿ ಹಲವು ಜನರಿಗೆ ಅರೋಗ್ಯ ಸಮಸ್ಯೆ ಉಂಟಾಗಿದೆ.

ಈ ಬಗ್ಗೆ ಪಜೀರು ಪಂಚಾಯತಿ ಹಾಗೂ ಇನ್ನಿತರ ಇಲಾಖೆಗಳ ಗಮನಕ್ಕೆ ತರಲಾಗಿತ್ತು. ಇದೀಗ ಈ ಭಾಗದ‌ ಹೆಚ್ಚಿನ ಬಾವಿ ನೀರಲ್ಲೂ ತೈಲದ ವಾಸನೆ ಬರುತ್ತಿದೆ. ಸಂಬಾರತೋಟದ ಮುಖ್ಯ ರಸ್ತೆಗೆ ತಾಗಿಕೊಂಡೇ ಇರುವ ಪೆಟ್ರೋಲ್ ಪಂಪ್‌ ಮೇಲೆ ಅನುಮಾನ ಉಂಟಾಗಿದೆ. ಪೆಟ್ರೋಲ್ ಪಂಪ್ ನ ತಳ ಟ್ಯಾಂಕ್ ನಲ್ಲಿ ತೈಲ ಸೋರಿಕೆ ಅನುಮಾನ ಸೃಷ್ಟಿಯಾಗಿದ್ದು, ಸಮಸ್ಯೆ ಆರಂಭವಾದಾಗಿನಿಂದಲೇ ಸ್ಥಳೀಯರಿಂದಲೇ ಬಾವಿಯ ನೀರಿನ ಟೆಸ್ಟ್ ಮಾಡಲಾಗಿದೆ. ಕಾರ್ಬನ್ ಅನಾಲಿಸ್ಟಿಕ್ ಟೆಸ್ಟ್, ವಿಒಸಿ ಟೆಸ್ಟ್, ಮಂಗಳೂರು ಬಯೊಟೆಕ್ ಲ್ಯಾಬೊರೇಟರಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಲಾಗಿದೆ.