Home News NPS New Rule​: NPS ಅಧೀನದಲ್ಲಿರೋ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ – ಸಿಗಲಿದೆ ನಿಮಗೆ...

NPS New Rule​: NPS ಅಧೀನದಲ್ಲಿರೋ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ – ಸಿಗಲಿದೆ ನಿಮಗೆ ಈ ಎಲ್ಲಾ ಪ್ರಯೋಜನಗಳು !!

NPS New Rule

Hindu neighbor gifts plot of land

Hindu neighbour gifts land to Muslim journalist

NPS New Rule​: ರಾಷ್ಟ್ರೀಯ ಪಿಂಚಣಿ ನಿಧಿಯಲ್ಲಿ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್​ಆರ್​ಡಿಎ) ಇತ್ತೀಚೆಗೆ ಹೊಸ ನಿಯಮಗಳನ್ನು (NPS New Rule) ಘೋಷಿಸಿದೆ. ಈ ಹೊಸ ನಿಯಮದಡಿ (ಪಿಎಫ್​ಆರ್​ಡಿಎ) ತನ್ನ ಗ್ರಾಹಕರಿಗೆ ವ್ಯವಸ್ಥಿತ ಹಿಂದೆಗೆದುಕೊಳ್ಳುವ (ಎಸ್​ಎಲ್​ ಡಬ್ಲ್ಯೂ) ಸೌಲಭ್ಯವನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ.

ಸರಳವಾಗಿ ಹೇಳುವುದಾದರೆ, ಇದು ಗ್ರಾಹಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ತಮ್ಮ ಹೂಡಿಕೆಯಿಂದ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲಾಗಿ, ನಿಯಮಿತವಾಗಿ ಪಡೆಯಲು ಅವಕಾಶ ನೀಡಿದ್ದು, ಇದರಿಂದ ಉದ್ಯೋಗಿಗಳು ಪ್ರಯೋಜನ ಪಡೆಯುತ್ತಾರೆ. ಪರಿಷ್ಕೃತ ನಿಯಮದ ಅನುಸಾರ, ಚಂದಾದಾರರು ಅವರ ಎನ್​ಪಿಎಸ್​​ ಮೆಚ್ಯೂರಿಟಿ ಹಣದಲ್ಲಿ ಶೇ 60ರಷ್ಟು ಹಣವನ್ನು ಕಂತುಗಳ ಮೂಲಕ ಹಿಂತೆಗೆದುಕೊಳ್ಳಬಹುದಾಗಿದೆ.

ಹೊಸ ನಿಯಮ ಪ್ರಕಾರ ನಿಯಮಿತ ವ್ಯವಸ್ಥಿತ ಲಂಪ್ಸಮ್​ ಹಿಂದೆಗೆದುಕೊಳ್ಳುವಿಕೆ ಮೂಲಕ ಗ್ರಾಹಕರು ಮಾಸಿಕ, ತ್ರೈಮಾಸಿಕ, ಅರ್ಧ- ವಾರ್ಷಿಕ ಮತ್ತು ವಾರ್ಷಿಕ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎನ್​ಪಿಎಸ್​ ವಾಪಸಾತಿಗಳನ್ನು ಪಡೆಯುವ ಸಂಬಂಧ ಅದನ್ನು ಪಾವತಿಯ ಆಯ್ಕೆ ಮಾಡುವ ಸಂದರ್ಭದಲ್ಲಿ ಅಧಿಕೃತ ಮಾಡಬೇಕಿದೆ. ಈ ಹಿಂದೆ ನೀಡಿದ ನಿಯಮಕ್ಕೆ ಕೊಂಚ ವಿನಾಯಿತಿ ನೀಡಿ ಶೇ 60ರಷ್ಟು ಹಣವನ್ನು ಹೊಸ ವ್ಯವಸ್ಥಿತ ಮೊತ್ತದ ಮೂಲಕ ಪಡೆಯಬಹುದು. 40ರಷ್ಟು ಕಾರ್ಪಸ್​ ಅನ್ನು ವರ್ಷಾಶನ ಪಡೆಯಬಹುದಾಗಿದೆ. ಈ ಹೊಸ ವ್ಯವಸ್ಥೆಯನ್ನು ನವೀಕರಣ ಮಾಡಲು ಎನ್​ಪಿಎಸ್​ ಹೂಡಿಕೆಗಳಿಗೆ ಕೆವೈಸಿ ಸಂಬಂಧಿತ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪಿಎಫ್​ಆರ್​ಡಿಎ ಕೇಂದ್ರಿಯ ದಾಖಲೆ ಕೀಪಿಂಗ್​ ಏಜೆನ್ಸಿಗಳಿಗೆ ನೀಡಿದೆ .

ಪಿಎಫ್​ಆರ್​ಡಿಎ ಅಕ್ಟೋಬರ್​ 27, 2023ರಲ್ಲಿ ಹೊರಡಿಸಿದ ಹೊಸ ಸುತ್ತೋಲೆ ಅನುಸಾರ, ಒಟ್ಟು ಮೊತ್ತವನ್ನು ಹಿಂಪಡೆಯುವ ಆಯ್ಕೆಯ ವಿವರಗಳನ್ನು ಕೇಳಲಾಗಿದೆ. ಜೊತೆಗೆ ಹೂಡಿಕೆದಾರರಿಗೆ ಎನ್​ಪಿಎಸ್​ ಕಾರ್ಪಸ್​ ಫಂಡ್​ನ ಶೇ 60ರಷ್ಟು ಮುಕ್ತಾಯದ ಮೊತ್ತದ ಮೇಲೆ ಹಿಂಪಡೆಯಬಹುದಾಗಿದೆ.

ಸದ್ಯ ಪಿಎಫ್​ಆರ್​ಡಿಎ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿ ಹಣವನ್ನು ಹಿಂಪಡೆಯಲು ಷೇರುದಾರರಿಗೆ ಪೆನ್ನಿ ಡ್ರಾಪ್ ಪರಿಶೀಲನೆ ಕಡ್ಡಾಯವಾಗಿದೆ. ಇದು ಷೇರುದಾರರಿಂದ ಹಣವನ್ನು ಸರಿಯಾದ ಸಮಯಕ್ಕೆ ವರ್ಗಾವಣೆಯ ಭರವಸೆಯನ್ನು ನೀಡುತ್ತದೆ. ಈ ಪೆನ್ನಿ ಡ್ರಾಪ್​ ಪ್ರಕ್ರಿಯೆ, ಬ್ಯಾಂಕ್​ ಉಳಿತಾಯ ಖಾತೆ ವ್ಯವಸ್ಥೆಯನ್ನು ಸಿಆರ್​ಎ ಗಮನಿಸಲಿದೆ.