Home News ಧರ್ಮಸ್ಥಳ ತನಿಖೆ: ಬೇಗ ತನಿಖೆ ಮುಗಿಸಲು SIT ಗೆ ಸೂಚನೆ – ಗೃಹ ಸಚಿವ ಜಿ....

ಧರ್ಮಸ್ಥಳ ತನಿಖೆ: ಬೇಗ ತನಿಖೆ ಮುಗಿಸಲು SIT ಗೆ ಸೂಚನೆ – ಗೃಹ ಸಚಿವ ಜಿ. ಪರಮೇಶ್ವರ್

Dr G parameshwar

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯು ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ನಿರ್ದೇಶಿಸಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳು ಬರಲು ಬಾಕಿ ಉಳಿದಿವೆ ಎಂದು ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

“ಎಸ್‌ಐಟಿ ತನ್ನ ಕೆಲಸ ಮಾಡುತ್ತಿದೆ. ಎಫ್‌ಎಸ್‌ಎಲ್ ವರದಿಗಳು ಬರಬೇಕು. ಇತ್ತೀಚೆಗೆ ಪತ್ತೆಯಾದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಈ ಹಿಂದೆ ಪತ್ತೆಯಾದ ವಿಷಯಗಳ ಕುರಿತು ವರದಿಗಳನ್ನು ಅಂತಿಮಗೊಳಿಸಿ ಕಳುಹಿಸಲು ನಾವು ಅವರನ್ನು ಕೇಳಿದ್ದೇವೆ. ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಸ್‌ಐಟಿಗೆ ಸೂಚನ್ ನೀಡಲಾಗಿದೆ” ಎಂದು ಅವರು ಹೇಳಿದರು.

‘ತನಿಖೆಗೆ ಸಂಬಂಧಿಸಿದಂತೆ ಒಬ್ಬರ ನಂತರ ಒಬ್ಬರು ಅರ್ಜಿಗಳನ್ನು ಸಲ್ಲಿಸಲು ಬರುವುದು, ಅದರ ತನಿಖೆ ನಡೆಸುವುದು ಸಾಧ್ಯವಿಲ್ಲ; ಇದಕ್ಕೆ ಒಂದು ಅಂತ್ಯ ಇರಬೇಕು. ಎಸ್‌ಐಟಿಗೆ ನಾಳೆ ಅಥವಾ ಮರುದಿನವೇ ತನಿಖೆಯನ್ನು ಪೂರ್ಣಗೊಳಿಸಲು ಹೇಳಲು ಸಾಧ್ಯವಿಲ್ಲ. ತನಿಖೆಯನ್ನು ಮುಕ್ತಾಯಗೊಳಿಸಲು ಅವರಿಗೆ ಮಾಹಿತಿ ಅಥವಾ ಸಾಮಗ್ರಿಗಳು ಬೇಕಾಗುತ್ತವೆ. ಎಫ್‌ಎಸ್‌ಎಲ್ ವರದಿ ಬರಬೇಕು; ಆ ವರದಿಗಳನ್ನು ಅಂತಿಮಗೊಳಿಸಬೇಕು. ಆ ಎಲ್ಲ ವಿಷಯಗಳನ್ನು ಪರಿಗಣಿಸಿದ ನಂತರ, ಎಸ್‌ಐಟಿ ಕಾರ್ಯನಿರ್ವಹಿಸುತ್ತದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ;ಮೂಡಿಗೆರೆಯಲ್ಲಿ ರಸ್ತೆಯಲ್ಲಿ ಗದೆ ಸಮೇತ ಪ್ರತ್ಯಕ್ಷರಾದ ಯಮ-ಚಿತ್ರಗುಪ್ತ: ಹಾಳಾದ ರಸ್ತೆಯ ಗುಂಡಿ ಅಳೆದು ಎಚ್ಚರಿಕೆ!

ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವಿಳಂಬದ ಕುರಿತು, ‘ನ್ಯಾಯಾಲಯದಲ್ಲಿ ಏನಾಗುತ್ತದೆ ಎಂದು ನೋಡೋಣ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಥವಾ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಸರ್ಕಾರ ಯಾವುದರಲ್ಲೂ ಮಧ್ಯಪ್ರವೇಶಿಸುವುದಿಲ್ಲ ಅಥವಾ ಸೂಚನೆಗಳನ್ನು ನೀಡುವುದಿಲ್ಲ. ಪೊಲೀಸರು ತಮಗೆ ಬೇಕಾದಂತೆ ಕ್ರಮ ಕೈಗೊಳ್ಳುತ್ತಾರೆ” ಎಂದು ಗೃಹ ಸಚಿವರು ಹೇಳಿದ್ದಾರೆ.