Home News Norway: ಕಾರ್ಯಕ್ರಮದಲ್ಲಿ ಎಲ್ಲರೆದುರು ಟಾಪ್ ಎತ್ತಿ ತನ್ನ ಸ್ತನ ತೋರಿಸಿದ ಸಚಿವೆ – ಮೆಚ್ಚುಗೆ ವ್ಯಕ್ತಪಡಿಸಿದ...

Norway: ಕಾರ್ಯಕ್ರಮದಲ್ಲಿ ಎಲ್ಲರೆದುರು ಟಾಪ್ ಎತ್ತಿ ತನ್ನ ಸ್ತನ ತೋರಿಸಿದ ಸಚಿವೆ – ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ !!

Hindu neighbor gifts plot of land

Hindu neighbour gifts land to Muslim journalist

 

Norway: ಸಾರ್ವಜನಿಕವಾಗಿ ಗುರುತಿಸಿಕೊಂಡವರು ಎಲ್ಲರಿಗೂ ಮಾದರಿಯಾಗುವಂತ ಕೆಲಸಗಳನ್ನು ಮಾಡಬೇಕು. ಅವುಗಳ ಮೂಲಕವೇ ತಾವು ಸುದ್ದಿಯಾಗಬೇಕು. ಆದ್ರೆ ಇಲ್ಲೊಂದೆಡೆ ಒಬ್ಬಳು ಸಚಿವೆ ವೇದಿಕೆಯಲ್ಲಿ ಛೀ, ಥೂ ಅನ್ನುವಂತ ಕೆಲಸವನ್ನು ಮಾಡಿದ್ದಾಳೆ. ಅದರೆ ಇದನ್ನು ಸ್ವತಃ ಪ್ರಧಾನಿ ಅವರು ಮೆಚ್ಚಿದ್ದಾರಂತೆ!!

 

ಹೌದು, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾರ್ವೆಯ(Norway) ಸಾಂಸ್ಕೃತಿಕ ಸಚಿವೆ(Cultural Minister) ಇದ್ದಕ್ಕಿದ್ದಂತೆ ಟಾಪ್ ಎತ್ತಿ ತಮ್ಮ ಸ್ತನಗಳನ್ನು ಪ್ರದರ್ಶಿಸಿದ್ದಾಳೆ. ಈ ಮೂಲಕ ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಮತ್ತು ಸಾರ್ವಜನಿಕರ ಎದುರೇ ಸಚಿವೆ ಸ್ತನ ಪ್ರದರ್ಶಿಸಿದ್ದು, ಈ ಇದೀಗ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

 

ಅಂದಹಾಗೆ ಜೂನ್‌ನಲ್ಲಿ ಈ ಓಸ್ಲೋ ಪ್ರೈಡ್‌(Oslo Praid) ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಅನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಚಿವೆ ಲುಬ್ನಾ ಜ್ಯಾಫೆರಿಗೆ ʼಫ್ಯಾಗ್‌ ಹ್ಯಾಗ್‌ 2024ʼ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ ಲುಬ್ನಾ, ತಕ್ಷಣ ತಾವು ಧರಿಸಿದ್ದ ಟಾಪ್‌ ಅನ್ನು ಎತ್ತಿ ತನ್ನ ಸ್ತನಗಳನ್ನು ಪ್ರದರ್ಶಿಸಿದ್ದಾಳೆ. ಇದಕ್ಕೆ ಕಾರಣ ತಿಳಿಸಿ ಮಾತನಾಡಿದ ಅವರು ಈ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ. ನಿಮ್ಮನ್ನು ನೀವು ಹೊರಗೆ ತನ್ನಿ. ನಿಮ್ಮನ್ನು ನೀವು ಅಷ್ಟೋಂದು ಗಂಭೀರವಾಗಿ ಪರಿಗಣಿಸಬೇಡಿ ಎಂದಿದ್ದಾರೆ.

https://x.com/hanneramberg/status/1805925539607175467

ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ:

ಇನ್ನು ಲುಬ್ನಾರ ಈ ವರ್ತನೆ ನೆರೆದಿದ್ದ ಪ್ರೇಕ್ಷಕರಿಗೆ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿದೆ. ನಾರ್ವೆ ಪ್ರಧಾನಿ ಜೋನಸ್‌ ಗಹ್ರ್‌ ಸ್ಟೋರ್‌ ಅವರು ಲುಬ್ನಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲುಬ್ನಾ ಅವರು ಅತ್ಯಂತ ಆತ್ಮವಿಶ್ವಾಸ, ಮುಕ್ತ ಮತ್ತು ಅದ್ಭುತ ವ್ಯಕ್ತಿಯಾಗಿದ್ದಾರೆ. ದೇಶದಾದ್ಯಂತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಗೌರವ ನೀಡಲಾಗುತ್ತದೆʼ ಎಂದು ಹೇಳಿದ್ದಾರೆ