

Noida: ಮಹಿಳಾ ಪತ್ರಕರ್ತೆ ಶಿವಾಂಗಿ ಶುಕ್ಲಾ ಮತ್ತು ಕ್ಯಾಬ್ ಚಾಲಕನ ನಡುವೆ 95 ಪೈಸೆಗೆ ಜಗಳವಾದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಲಕ ಮತ್ತು ಶುಕ್ಲಾ ಮಧ್ಯೆ ಶುಲ್ಕ ಪಾವತಿಗೆ ಜಗಳ ಉಂಟಾಗಿದೆ. ಪೂರ್ತಿ ಶುಲ್ಕ ಪಾವತಿ ಮಾಡದೇ ಇರುವುದನ್ನು ಚಾಲಕ ಶುಕ್ಲ ಅವರಲ್ಲಿ ಪ್ರಶ್ನೆ ಮಾಡಿದಾಗ ಆಕೆ ನಿರಾಕರಿಸಿದ್ದಕ್ಕೆ ಜಗಳ ಆಗಿದೆ ಎಂದು ಹೇಳುತ್ತಾನೆ. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ಹೆಚ್ಚಾಗುತ್ತದೆ. ಚಾಲಕನ ಮಾತಿನ ರೀತಿಯನ್ನು ಶುಕ್ಲಾ ಅಸಭ್ಯ ಎನ್ನುತ್ತಾರೆ, ಇತ್ತ ಚಾಲಕ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರುತ್ತಿದ್ದಾನೆ.
ಶಿವಾಂಗಿ ಅವರ ಪ್ರಕಾರ, ರೂ.129.95 ಶುಲ್ಕವನ್ನು ಯುಪಿಐ ಮೂಲಕ ಪಾವತಿ ಮಾಡುವಾಗ ತಪ್ಪಾಗಿ ರೂ.129 ಎಂದು ಬರೆದು ಪಾವತಿ ಮಾಡಿದ್ದಾರೆ. ಇದಕ್ಕೆ ಚಾಲಕ ಸಿಟ್ಟಾಗಿ 95 ಪೈಸೆ ಕೊಡಿ ಎಂದು ಹೇಳಿದ್ದಾನೆ. ಇದಕ್ಕೆ ಶಿವಾಂಗಿ ಶುಕ್ಲಾಗೆ ಚಾಲಕನ ವರ್ತನೆ ಆತಂಕ, ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿತ್ತು. ರೆಕಾರ್ಡಿಂಗ್ ಮಾಡಲು ಪ್ರಾರಂಭ ಮಾಡಿದಾಗ ಆತನ ವರ್ತನೆ ಬದಲಾಯಿತು ಎನ್ನುವ ಹೇಳಿಕೆ ನೀಡಿದ್ದಾರೆ.













