Home News ಪಿಟ್‌ಬುಲ್‌, ರಾಟ್‌ವೀಲರ್ ತಳಿಯ ನಾಯಿ ಸಾಕಾಣಿಕೆಗೆ ಹೊಸ ಪರವಾನಗಿ ಇಲ್ಲ

ಪಿಟ್‌ಬುಲ್‌, ರಾಟ್‌ವೀಲರ್ ತಳಿಯ ನಾಯಿ ಸಾಕಾಣಿಕೆಗೆ ಹೊಸ ಪರವಾನಗಿ ಇಲ್ಲ

Pitbull Dog

Hindu neighbor gifts plot of land

Hindu neighbour gifts land to Muslim journalist

ಚೆನ್ನೈ: ಸಾಕುನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸಿ, ಮಾರಣಾಂತಿಕವಾಗಿ ಗಾಯಗೊಳಿಸುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಿಗೇ ಆಕ್ರಮಣಕಾರಿ ಸ್ವಭಾವದ ಶ್ವಾನ ತಳಿಗಳಾದ ಪಿಟ್‌ಬುಲ್ ಮತ್ತು ರಾಟ್ ವೀಲರ್ ಸಾಕಣಿಕೆಗೆ ಇನ್ನು ಮುಂದೆ ಹೊಸ ಲೈಸೆನ್ಸ್ ನೀಡುವುದಿಲ್ಲ ಎಂದು ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆ ಘೋಷಿಸಿದೆ.

ಈ 2 ತಳಿಗಳ ನಾಯಿಗಳನ್ನು ಸಾಕಲು ಈಗಾಗಲೇ ಪರವಾನಗಿ ಹೊಂದಿರುವವರು ತಮ್ಮ ಸಾಕು ಪ್ರಾಣಿಗಳನ್ನು ಮನೆಯಿಂದ ಹೊರಗೆ ಕರೆದೊಯ್ಯುವಾಗ ಕಡ್ಡಾಯವಾಗಿ ಕತ್ತಿನಪಟ್ಟಿ ಮತ್ತು ಬಾಯಿಗೆ ರಕ್ಷಾ ಕವಚಗಳನ್ನು ಬಳಸಲೇಬೇಕು ಎಂದು ನಿರ್ದೇಶನ ನೀಡಲಾಗಿದೆ.

ಚೆನ್ನೈನಲ್ಲಿ ಮಾತ್ರವಲ್ಲ ಕರ್ನಾಟಕ ಹಾಗೂ ಅಹಮದಾಬಾದ್ ನಲ್ಲೂ ಈ ತಳಿಯ ನಾಯಿಗಳು ಕಚ್ಚಿ ಮಕ್ಕಳು ಹಾಗೂ ವೃದ್ಧರು ಮೃತಪಟ್ಟ ಘಟನೆಗಳು ವರದಿಯಾಗಿವೆ. ಇತ್ತೀಚೆಗೆ ದಾವಣಗೆರೆ ಯಲ್ಲಿಯಾರೋ ಸಾಕಿದ ರಾಟ್‌ವೀಲರ್ ತಳಿಯ ನಾಯಿಗಳು ಮಹಿಳೆಯೊಬ್ಬರು ಕಚ್ಚಿದ್ದರಿಂದ ಆಕೆಯು ಮೃತಪಟ್ಟಿದ್ದರು.

ಡಿಸೆಂಬರ್ 20ರಿಂದ ಎರಡು ತಳಿಗಳ ಸಂತಾನೋತ್ಪತ್ತಿಗೆ ಹೊಸ ಪರವಾನಗಿಗಳನ್ನು ನಿಲ್ಲಿಸಲಾಗುವುದು ಮತ್ತು ಯಾರಾದರೂ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ 1 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ.