Home News Bhoo Guarantee: ಇನ್ಮೇಲೆ ಭೂ ಸಂಬಂಧಿತ ಸಮಸ್ಯೆಗಳು ಇರೋದಿಲ್ಲ: ಭೂ ಗ್ಯಾರಂಟಿ ಪೋರ್ಟಾಲ್ ಮೂಲಕ ಎಲ್ಲವೂ...

Bhoo Guarantee: ಇನ್ಮೇಲೆ ಭೂ ಸಂಬಂಧಿತ ಸಮಸ್ಯೆಗಳು ಇರೋದಿಲ್ಲ: ಭೂ ಗ್ಯಾರಂಟಿ ಪೋರ್ಟಾಲ್ ಮೂಲಕ ಎಲ್ಲವೂ ಸುಲಭ

Hindu neighbor gifts plot of land

Hindu neighbour gifts land to Muslim journalist

Bhoo Guarantee: ರಾಜ್ಯ ಸರ್ಕಾರವು ಭೂಮಿಗೆ ಸಂಬಂಧ ಪಟ್ಟಂತೆ ವಿವಿಧ ಡಿಜಿಟಲ್ ಮಾಧ್ಯಮದಲ್ಲಿರುವ ದತ್ತಾಂಶಗಳನ್ನೆಲ್ಲ ಒಟ್ಟುಗೂಡಿಸಿ ಒಂದೆಡೆ ಸಿಗುವಂತೆ ಮಾಡಲು ಯೋಜನೆ ನಡೆಸುತ್ತಿದೆ.

ಪ್ರಸ್ತುತ ಭೂಮಿ, ಕಾವೇರಿ ಹೀಗೆ ಅನೇಕ ಮೂಲಗಳಿದ್ದು, ಇವುಗಳನ್ನೆಲ್ಲ ತಾಳೆ ಮಾಡಿ ಸರಿಯಾದ ಮಾಹಿತಿಯನ್ನು ಒಂದೆಡೆ ನೀಡಲಾಗುತ್ತೆ ಹಾಗೂ ಅದಕ್ಕೆ ಆಧಾರ್ ಹಾಗೂ ಇ-ಕೆವೈಸಿ ಜೋಡಿಸಲಾಗುತ್ತದೆ. ಎಲ್ಲವನ್ನು ಡಿಜಿಟಲೀಕರಣಗೊಳಿಸಿ ಕಾಗದ ರಹಿತ ಆಡಳಿತವನ್ನು ಮಾಡುವ ಗುರಿಯನ್ನು ಸರ್ಕಾರ ಈ ಮೂಲಕ ಹೊಂದಿದೆ.

ನನ್ನ ಹಕ್ಕು, ಭೂ ಸುರಕ್ಷಾ ಹೀಗೆ ಹಲವು ಕಾರ್ಯಕ್ರಮಗಳನ್ನು ಒಂದುಗೂಡಿಸಿ ಭೂ ಗ್ಯಾರಂಟಿ ಎಂದು ಕರೆಯಲಾಗಿದ್ದು, ಇದರಿಂದಾಗಿ 1960 ರಿಂದ 2000 ರವರೆಗಿನ ಮಂಜೂರಾದ ಜಮೀನುಗಳಿಗೆ ಈ ಮೂಲಕ ದರ್ಖಾಸ್ತು ಪೋಡಿ ಮಾಡಿಕೊಡಲಾಗುತ್ತದೆ. ಹಾಗೂ ಇಲ್ಲಿ ಆಧಾರ್ ಹಾಗೂ ಪಹಣಿಯನ್ನು ಜೋಡಿಸಿ, ಇ-ಕೆವೈಸಿ ಮಾಡುವುದರಿಂದ ರೈತನಿಗೆ ಯಾವುದೇ ರೀತಿಯ ವಂಚನೆಗಳಾಗಳು ಸಾಧ್ಯವಿಲ್ಲ.

ಇನ್ನೂ ರಾಜ್ಯದ ಹಲವಾರು ಖಾತೆಗಳು ಇನ್ನೂ ಕೂಡ ಮೃತರ ಹೆಸರಿನಲ್ಲೇ ಇದ್ದು, ಕೆವೈಸಿ ಮಾಡುವ ಮೂಲಕ ಅಧಿಕಾರಿಗಳೇ ಬಂದು ಇ-ಪೌತಿ ಯನ್ನು ವಾರಸುದಾರರಿಗೆ ಮಾಡಿಕೊಡುತ್ತಾರೆ. ಹಾಗೂ ಇದರಿಂದಾಗಿ ಕಚೇರಿಗಳಿಗೆ ಅಲೆಯುವ ಪ್ರಸಂಗ ಎದುರಾಗುವುದಿಲ್ಲ.

ಇನ್ನು ಈ ಮೂಲಕ ಭೂ ಸುರಕ್ಷಾ ಎಂಬ ಪೋರ್ಟಾಲ್ ನಲ್ಲಿ ತಮ್ಮ ಹೆಸರು ವಿಳಾಸ ನೋಂದಾಯಿಸುವ ಮೂಲಕ ತಮ್ಮ ಇಡೀ ಜಮೀನಿನ ಮಾಹಿತಿಯನ್ನು ಕುಳಿತಲ್ಲೇ ಪಡೆಯಬಹುದಾಗಿದೆ.

ಇದರಿಂದಾಗಿ ಸ್ವಯಂ ಚಾಲಿತ ಮ್ಯುಟೇಶನ್ ಆಗುವ ವ್ಯವಸ್ಥೆ ಬರಲಿದ್ದು, ಇನ್ನೂ ಮ್ಯುಟೇಶನ್ ಗೆ ತಗುಲುತ್ತಿದ್ದ 5 ರಿಂದ 6 ದಿನಗಳು ಇದೀಗ 12 ಗಂಟೆಗೆ ಇಳಿಯುತ್ತವೆ. ಇನ್ನು ರಾಜ್ಯದ ಎಲ್ಲ ಜಿಲ್ಲಾ ನೋಂದಣಿಕಾರಿ ವ್ಯಾಪ್ತಿಯ ಉಪ ನೋಂದಣಿಕಾರಿ ಕಚೇರಿಗಳಲ್ಲಜ್ ಒಂದು ಕಚೇರಿ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸುವ ಮೂಲಕ ಜನಸೇವೆ ಮಾಡಲಿದೆ. ಹಾಗೂ ಈ ಕ್ರಮಗಳು ಈ ಜೂನ್ 1 ರಿಂದ ಜಾರಿಯಾಗಿವೆ.