Home News ನಿಮಗಿದು ಗೊತ್ತೇ? ವಿಮಾನ ನಿಲ್ದಾಣ ಇಲ್ಲದೇ ಇರೋ ಐದು ದೇಶ ಯಾವುದೆಂದು? ಇಲ್ಲಿನ ಜನ ಬೇರೆ...

ನಿಮಗಿದು ಗೊತ್ತೇ? ವಿಮಾನ ನಿಲ್ದಾಣ ಇಲ್ಲದೇ ಇರೋ ಐದು ದೇಶ ಯಾವುದೆಂದು? ಇಲ್ಲಿನ ಜನ ಬೇರೆ ದೇಶಗಳಿಗೆ ಹೋಗ್ಹೋದೇಗೆ?

no airports

Hindu neighbor gifts plot of land

Hindu neighbour gifts land to Muslim journalist

No Airports : ಹೆಚ್ಚಾಗಿ ದೂರದ ಪ್ರಯಾಣ ಮಾಡಲು ವಿಮಾನವನ್ನೇ ಆಯ್ಕೆ ಮಾಡುತ್ತೇವೆ. ಯಾಕೆಂದರೆ ವಿಮಾನದಲ್ಲಿ ಆರಾಮದಾಯಕವಾಗಿ ಶೀಘ್ರ ಪ್ರಯಾಣ ಮಾಡಬಹುದಾಗಿದೆ. ಅದು ಬಿಟ್ಟರೆ ಜಲ ಮಾರ್ಗವಾಗಿ ಪ್ರಯಾಣಿಸುತ್ತಾರೆ. ಆದರೆ ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲದ( No Airports) ಹಲವಾರು ದೇಶಗಳು ಜಗತ್ತಿನಲ್ಲಿವೆ.

ಹೌದು ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲದ ಹಲವಾರು ದೇಶಗಳು ಜಗತ್ತಿನಲ್ಲಿವೆ. ಹಾಗಾದರೆ ಯಾವ ದೇಶಗಳು ಎಂದು ಇಲ್ಲಿ ತಿಳಿಯಿರಿ.

  • ಸ್ಯಾನ್ ಮರಿನೋ
    ಸ್ಯಾನ್ ಮರಿನೋ ವ್ಯಾಟಿಕನ್ ಸಿಟಿ ಮತ್ತು ರೋಮ್‌ಗೆ ಪಕ್ಕದಲ್ಲಿದೆ . ಈ ದೇಶವು ಇಟಲಿಯಿಂದ ಸುತ್ತುವರೆದಿದ್ದು ಆದರೆ ಆಶ್ಚರ್ಯಕರ ಸಂಗತಿಯೆಂದರೆ ಇದು ಸಮುದ್ರ ಮಾರ್ಗ ಅಥವಾ ವಾಯು ಮಾರ್ಗದ ಮೂಲಕ ಸಂಪರ್ಕ ಹೊಂದಿಲ್ಲ. ಈ ದೇಶದ ಪರಿಧಿಯು 40 ಕಿಲೋಮೀಟರ್‌ಗಿಂತ ಕಡಿಮೆ ಇರುವುದರಿಂದ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸ್ಥಳವಿಲ್ಲ. ದೇಶಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ 16 ಕಿಲೋಮೀಟರ್ ದೂರದಲ್ಲಿರುವ ರಿಮಿನಿ. ಇದಲ್ಲದೆ, ಜನರು ವೆನಿಸ್, ಪಿಸಾ, ಫ್ಲಾರೆನ್ಸ್ ಮತ್ತು ಬೊಲೊಗ್ನಾ ವಿಮಾನ ನಿಲ್ದಾಣಗಳ ಆಯ್ಕೆಯನ್ನು ಸಹ ಹೊಂದಿದ್ದಾರೆ.
  • ಅಂಡೋರಾ:
    ಸ್ಪೇನ್ ಮತ್ತು ಫ್ರಾನ್ಸ್ ನಡುವೆ ನೆಲೆಗೊಂಡಿರುವ ಈ ಸಣ್ಣ ದೇಶವು ಪೈರಿನೀಸ್ ಪರ್ವತಗಳಿಂದ ಯುರೋಪಿನ ಉಳಿದ ಭಾಗಗಳಿಂದ ಕಡಿತಗೊಂಡಿದೆ. ಈ ದೇಶವು ಸಂಪೂರ್ಣವಾಗಿ ಪರ್ವತಗಳ ಮೇಲೆ ನೆಲೆಸಿದೆ. ಇದರ ಎತ್ತರವು 3000 ಅಡಿಗಳಷ್ಟಿದೆ. ಹೀಗಾಗಿ ಈ ದೇಶವು ತನ್ನದೇ ಆದ ಕಾರ್ಯಾಚರಣೆಯ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ಬರಲು ಹತ್ತಿರದ ವಿಮಾನ ನಿಲ್ದಾಣವೆಂದರೆ ಕ್ಯಾಟಲೋನಿಯಾದ ಅಂಡೋರಾ-ಲಾ ಸಿಯು ವಿಮಾನ ನಿಲ್ದಾಣ. ಇದು ಸುಮಾರು 30 ಕಿಲೋಮೀಟರ್ ದೂರದಲ್ಲಿದೆ.
  • ಲಿಚ್ಟೆನ್‌ಸ್ಟೈನ್
    ಲಿಚ್ಟೆನ್‌ಸ್ಟೈನ್ ಪ್ರಿನ್ಸಿಪಾಲಿಟಿಯು ಪರ್ವತ ಪ್ರದೇಶಗಳ ಮಧ್ಯದಲ್ಲಿದೆ. ಇದರ ವಿಸ್ತೀರ್ಣ 160 ಚದರ ಕಿಲೋಮೀಟರ್. ಲಿಚ್ಟೆನ್‌ಸ್ಟೈನ್‌ನ ಸಂಪೂರ್ಣ ಪರಿಧಿಯು 75 ಕಿಲೋಮೀಟರ್‌ಗಳು. ಅದರ ಸಂಕೀರ್ಣ ಸ್ಥಳದಿಂದಾಗಿ, ವಿಮಾನ ನಿಲ್ದಾಣ ನಿರ್ಮಾಣ ಇಲ್ಲಿ ಸಾಧ್ಯವಿಲ್ಲ. ಇಲ್ಲಿಂದ ಪ್ರಯಾಣ ಮಾಡಬೇಕಾದರೆ 120 ಕಿ.ಮೀ ದೂರದಲ್ಲಿರುವ ಜ್ಯೂರಿಚ್ ವಿಮಾನ ನಿಲ್ದಾಣಕ್ಕೆ ಬಸ್ ಅಥವಾ ಕ್ಯಾಬ್ ಮೂಲಕ ಹೋಗಬೇಕು.
  • ವ್ಯಾಟಿಕನ್ ಸಿಟಿ
    ವ್ಯಾಟಿಕನ್ ಸಿಟಿ ಪ್ರಪಂಚದಲ್ಲೇ ಅತ್ಯಂತ ಚಿಕ್ಕ ರಾಷ್ಟ್ರ ಎಂದು ಹೇಳಲಾಗುತ್ತದೆ. ಈ ದೇಶದ ವಿಸ್ತೀರ್ಣ 0.44 ಚದರ ಕಿಲೋಮೀಟರ್. ಈ ದೇಶವು ರೋಮ್ ನಡುವೆ ಇದೆ. ಇದಕ್ಕೆ ಸಮುದ್ರ ಮಾರ್ಗವಾಗಲಿ ಅಥವಾ ವಾಯು ಮಾರ್ಗವಾಗಲಿ ಇಲ್ಲ. ವಿಮಾನದಲ್ಲಿ ಪ್ರಯಾಣಿಸಲು, ಜನರು ಫ್ಯೂಮಿಸಿನೊ ಮತ್ತು ಸಿಯಾಂಪಿನೊ ವಿಮಾನ ನಿಲ್ದಾಣಗಳಿಗೆ ಹೋಗಬೇಕು, ಅಲ್ಲಿಗೆ ರೈಲಿನಲ್ಲಿ ತೆರಳಬೇಕು. ಈ ರೈಲ್ವೇ ನಿಲ್ದಾಣಕ್ಕೆ ತೆರಳಲು 30 ನಿಮಿಷಗಳವರೆಗೆ ತೆಗೆದುಕೊಳ್ಳುತ್ತದೆ.
  • ಮೊನಾಕೊ ಪ್ರಿನ್ಸಿಪಾಲಿಟಿ
    ಈ ದೇಶದಲ್ಲಿಯೂ ವಿಮಾನ ನಿಲ್ದಾಣವಿಲ್ಲ. ಇದು ರೈಲ್ವೆ ಮೂಲಕ ಇತರ ದೇಶಗಳಿಗೆ ಸಂಪರ್ಕ ಹೊಂದಿದೆ. ಈ ದೇಶದ ಜನಸಂಖ್ಯೆ ಸುಮಾರು 40 ಸಾವಿರ. ಇಲ್ಲಿ ವಿಮಾನ ನಿಲ್ದಾಣವೂ ಇಲ್ಲ. ವಿಮಾನ ಸೇವೆಗಾಗಿ ತನ್ನ ನೆರೆಯ ರಾಷ್ಟ್ರವಾದ ನೈಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಹೌದು ಈ ಮೇಲಿನ ದೇಶಗಳು ಕಡಿಮೆ ವಿಸ್ತೀರ್ಣ ಹೊಂದಿರುವ ಕಾರಣ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸಾಧ್ಯ ಇಲ್ಲ ಎಂಬುದು ಮುಖ್ಯ ಕಾರಣವಾಗಿದೆ.