Home News Nitin Ghadkari: ಹೊಸ ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ ನೀಡಿದ ನಿತಿನ್‌ ಗಡ್ಕರಿ

Nitin Ghadkari: ಹೊಸ ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ ನೀಡಿದ ನಿತಿನ್‌ ಗಡ್ಕರಿ

Nitin Gadkari

Hindu neighbor gifts plot of land

Hindu neighbour gifts land to Muslim journalist

Nitin Ghadkari: ಹೊಸ ಕಾರು ಖರೀದಿ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಭಾರೀ ದುಬಾರಿಯಾಗಿರುವ ವಿದ್ಯುತ್‌ ಚಾಲಿತ (ಇವಿ) ವಾಹನಗಳ ಬೆಲೆ ಇನ್ನು ನಾಲ್ಕರಿಂದ ಆರು ತಿಂಗಳಲ್ಲಿ ಪೆಟ್ರೋಲ್‌ ವಾಹನಗಳ ದರಕ್ಕೆ ಸಮನಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:School Timings: ಜಾತಿ ಸಮೀಕ್ಷೆ: ಕರ್ನಾಟಕದಾದ್ಯಂತ ಶಾಲಾ ಸಮಯ ಬದಲಾವಣೆ

ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಸರಕಾರ ಉತ್ತೇಜನ ನೀಡಿದ್ದು, ಜನರು ಹೆಚ್ಚಿನ ಒಲವು ತೋರುತ್ತಿರುವುದರ ನಡುವೆ ನಿತಿನ್‌ ಗಡ್ಕರಿ ಅವರ ಹೇಳಿಕೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್‌ ಗಡ್ಕರಿ, ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತರಾಗಿರುವುದು ಆರ್ಥಿಕತೆ ಮತ್ತು ಪರಿಸರದ ದೃಷ್ಟಿಯಿಂದ ಹಾನಿಕಾರಕ. ಈಗ ದುಬಾರಿಯಾಗಿರುವ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಇನ್ನು ನಾಲ್ಕರಿಂದ ಆರು ತಿಂಗಳಲ್ಲಿ ಪೆಟ್ರೋಲ್‌ ವಾಹನಗಳ ಬೆಲೆಗೆ ಸಮನಾಗುತ್ತದೆ ಎಂದು ಹೇಳಿದ್ದಾರೆ.