Home News Nityananda Swamy: ತನ್ನ 4,000 ಕೋಟಿಗೆ ಉತ್ತರಾಧಿಕಾರಿ ಘೋಷಿಸಿದ ನಿತ್ಯಾನಂದ ಸ್ವಾಮಿ!!

Nityananda Swamy: ತನ್ನ 4,000 ಕೋಟಿಗೆ ಉತ್ತರಾಧಿಕಾರಿ ಘೋಷಿಸಿದ ನಿತ್ಯಾನಂದ ಸ್ವಾಮಿ!!

Hindu neighbor gifts plot of land

Hindu neighbour gifts land to Muslim journalist

Nityananda Swamy : ಅತ್ಯಾಚಾರ ಆರೋಪದಲ್ಲಿ ಸಿಲುಕಿ ಬಳಿಕ ವಿವಾದಗಳಿಂದಲೇ ಸುದ್ದಿ ಆಗುತ್ತಿರುವ, ಸದ್ಯ ತಾನೆ ಮರೆಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಇದೀಗ ತಂದ ನಾಲ್ಕು ಸಾವಿರ ಕೋಟಿಗೆ ಉತ್ತರ ಅಧಿಕಾರಿ ಯಾರೆಂದು ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

ಅತ್ಯಾಚಾರ ಆರೋಪದ ಬಳಿಕ ಈಕ್ವೆಡಾರ್ ಬಳಿ ಒಂದು ದ್ವೀಪವನ್ನು ಖರೀದಿಸಿ ಅದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಹೆಸರಿಟ್ಟಿದ್ದ ನಿತ್ಯಾನಂದ ಕೈಲಾಸಕ್ಕೆ ಪ್ರಯಾಣಿಸಲು ನಿರ್ದಿಷ್ಟವಾಗಿ ಕರೆನ್ಸಿ, ಪಾಸ್‌ಪೋರ್ಟ್ ಮತ್ತು ಧ್ವಜವನ್ನು ಕೂಡ ವಿನ್ಯಾಸಗೊಳಿಸಿದ್ದ. ನಿತ್ಯಾನಂದ ತನ್ನ ದೇಶಕ್ಕೆ ಮಾನ್ಯತೆ ನೀಡುವಂತೆ ಕೋರಿ ವಿಶ್ವಸಂಸ್ಥೆಗೆ ಪ್ರತಿನಿಧಿಗಳನ್ನು ಕೂಡ ಕಳುಹಿಸಿದ್ದ.

ಆದರೆ, ನಿತ್ಯಾನಂದ ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಈ ವಿಚಾರದ ಬಳಿಕ ಸುಮಾರು 4,000 ಕೋಟಿ ರೂಪಾಯಿ ಮೌಲ್ಯದ ನಿತ್ಯಾನಂದ ಕೈಲಾಸ ದೇಶದ ಮುಂದಿನ ಆಡಳಿತಗಾರ ಯಾರು ಎಂಬುದರ ಬಗ್ಗೆ ಪ್ರಸ್ತುತ ತೀವ್ರ ಕುತೂಹಲವಿದೆ. ಈ ಬೆನ್ನಲ್ಲೇ ನಿತ್ಯಾನಂದ ಅವರ ಸೋದರಳಿಯ ಅವರ ಉತ್ತರಾಧಿಕಾರಿಯಾಗುತ್ತಾರೆ ಎಂಬ ವದಂತಿ ಇದೆ. ಮತ್ತೊಂದೆಡೆ, ನಿತ್ಯಾನಂದನನ್ನು ಪ್ರೀತಿಸಿದ್ದ ನಂದಿತಾ ಕೂಡ ಈ ಪೀಠವನ್ನು ಏರಲು ಸಿದ್ಧರಾಗಿದ್ದಾರೆ ಎಂಬ ವರದಿಗಳಿವೆ.