Home News Bengaluru: ಮೃತ್ಯು‌ಕೂಪವಾಗ್ತಿರುವ ನೈಸ್ ರಸ್ತೆ! ಇನ್ಮುಂದೆ ನಗರದಲ್ಲಿ ಹೊಸ ರೂಲ್ಸ್ ಜಾರಿ!

Bengaluru: ಮೃತ್ಯು‌ಕೂಪವಾಗ್ತಿರುವ ನೈಸ್ ರಸ್ತೆ! ಇನ್ಮುಂದೆ ನಗರದಲ್ಲಿ ಹೊಸ ರೂಲ್ಸ್ ಜಾರಿ!

Bengaluru

Hindu neighbor gifts plot of land

Hindu neighbour gifts land to Muslim journalist

Bengaluru: ನಗರದಲ್ಲಿನ (Bengaluru) ನೈಸ್ ರಸ್ತೆ ಮೃತ್ಯು‌ಕೂಪವಾಕ್ತಿರುವ ಹಿನ್ನೆಲೆ ಅಪಘಾತಗಳ ಸಂಖ್ಯೆ ನಿಯಂತ್ರಿಸಲು ವಾಹನಗಳ ವೇಗದ ಚಾಲನೆಗೆ ಇನ್ಮುಂದೆ ಹೊಸ ನಿಯಮ ಜಾರಿಗೆ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಹೊಸ ಆದೇಶ ಹೋರಡಿಸಿದ್ದಾರೆ.

ವಾಹನ ಸವಾರರು ಸಮಯ ಉಳಿಸಲು ನೈಸ್ ರಸ್ತೆಯಲ್ಲಿ ಅತಿವೇಗವಾಗಿ ಸಂಚಾರ ಮಾಡುವ ಕಾರಣ, ಸವಾರರ ಸ್ಪೀಡ್  ನಿಯಂತ್ರಣ ಮಾಡಲು ಪೊಲೀಸರು ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದರ ಜೊತೆಗೆ ರಾತ್ರಿ ವೇಳೆ‌ ದ್ವಿಚಕ್ರ ವಾಹನ ಸಂಚಾರಕ್ಕೂ ನಿಷೇಧ ಹೇರಲಾಗಿದ್ದು ಇವತ್ತಿನಿಂದಲೇ ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದೆ.

ರಸ್ತೆ ಅಪಘಾತ ಹೆಚ್ಚಾದ ಹಿನ್ನಲೆ ನಗರ ಪೊಲೀಸ್ ಆಯುಕ್ತ ಬಿ‌.ದ‌ಯಾನಂದ್ ಆದೇಶ ಹೊರಡಿಸಿದ್ದು‌, ನಿಯಮ ಪಾಲನೆ ಜೊತೆಗೆ ಮಾರ್ಗ ಸೂಚಿಗಳಿದ್ರು ಪಾಲಿಸದ ವಾಹನ ಚಾಲಕರು ವಿರುದ್ದ ಕಾನೂನು ರೀತಿಯಾಗಿ ಆಯಾ ಠಾಣಾ ವ್ಯಾಪ್ತಿಯ ಸಂಚಾರ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ನಾಳೆಯಿಂದ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರಗೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರಿಂದ ಆದೇಶ ನೀಡಿದ್ದಾರೆ. ಅದರಲ್ಲೂ ನೈಸ್ ರಸ್ತೆಯ ಸುತ್ತಾಮುತ್ತಾ ಇರುವ ಎಂಟು ಸಂಚಾರಿ ಠಾಣೆಯ ಠಾಣಾಧಿಕಾರಿಗಳ ವರದಿ ಅನ್ವಯಿಸಿ ಈ ಆದೇಶ ನೀಡಲಾಗಿದೆ.