Home News Toll: ನ.15 ರಿಂದ ಹೊಸ ‘ಟೋಲ್’ ನಿಯಮ: UPI ಪಾವತಿದಾರರಿಗೆ ಭಾರೀ ರಿಯಾಯಿತಿ

Toll: ನ.15 ರಿಂದ ಹೊಸ ‘ಟೋಲ್’ ನಿಯಮ: UPI ಪಾವತಿದಾರರಿಗೆ ಭಾರೀ ರಿಯಾಯಿತಿ

Hindu neighbor gifts plot of land

Hindu neighbour gifts land to Muslim journalist

Toll: ಟೋಲ್ (Toll) ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ.

ಹೌದು, ಟೋಲ್‌ ಪ್ಲಾಜಾಗಳಲ್ಲಿ ನಗದು ವಹಿವಾಟು ಕಡಿಮೆಮಾಡಲು ಈ ಬದಲಾವಣೆ ತರಲಾಗಿದ್ದು, ನವೆಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಲ್ಲದೇ ಡಿಜಿಟಲ್‌ ಪಾವತಿ ಮಾಡುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳುವ ಜೊತೆಗೆ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ, ಹೆದ್ದಾರಿ ಬಳಕೆದಾರರ ಪ್ರಯಾಣ ಸಮಯ ಉಳಿತಾಯ ಕೂಡ ಮಾಡಬಹುದಾಗಿದೆ.

ಇದನ್ನೂ ಓದಿ:Coldrif Syrup: ಕೆಮ್ಮಿನ ಸಿರಪ್‌ ಸೇವಿಸಿ 11 ಮಕ್ಕಳು ಸಾವು ಪ್ರಕರಣ: ಸಿರಪ್‌ಗಳನ್ನು ಶಿಫಾರಸು ಮಾಡ್ತಿದ್ದ ವೈದ್ಯ ಅರೆಸ್ಟ್‌

ಉದಾಹರಣೆಗೆ ಫಾಸ್ಟ್‌ಟ್ಯಾಗ್ ಮೂಲಕ ವಾಹನದ ಟೋಲ್ ಶುಲ್ಕ 100 ರೂ. ಆಗಿದ್ದರೆ, ನಗದು ರೂಪದಲ್ಲಿ ಪಾವತಿಸಿದರೆ 200 ರೂ. ಆಗುತ್ತದೆ, ಆದರೆ UPI ಮೂಲಕ ಡಿಜಿಟಲ್ ಆಗಿ ಪಾವತಿಸಿದರೆ 125 ರೂ. ಮಾತ್ರ ಆಗುತ್ತದೆ. ಇದರರ್ಥ ನವೆಂಬರ್ 15 ರಿಂದ FASTag ಅಲ್ಲದ ಬಳಕೆದಾರರು UPI ಮೂಲಕ ಪಾವತಿ ಮಾಡಿದ್ರೆ 100 ರೂ.ನಲ್ಲಿ 75 ರೂ. ಉಳಿತಾಯ ಮಾಡಬಹುದಾಗಿದೆ.