Home latest ಮಕ್ಕಳ ಸುರಕ್ಷತೆಗಾಗಿಯೇ ಜಾರಿಯಾಗಿದೆ ಹೊಸ ನಿಯಮ |ಇನ್ನು ಮುಂದೆ ಬೈಕ್ ನಲ್ಲಿ ಮಕ್ಕಳನ್ನು ಹಿಂಬದಿ ಕೂರಿಸಿಕೊಂಡು...

ಮಕ್ಕಳ ಸುರಕ್ಷತೆಗಾಗಿಯೇ ಜಾರಿಯಾಗಿದೆ ಹೊಸ ನಿಯಮ |ಇನ್ನು ಮುಂದೆ ಬೈಕ್ ನಲ್ಲಿ ಮಕ್ಕಳನ್ನು ಹಿಂಬದಿ ಕೂರಿಸಿಕೊಂಡು ಪ್ರಯಾಣಿಸುವಾಗ ಎಚ್ಚರ.. ಎಚ್ಚರ ..!!

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ಇಲ್ಲಿಯವರೆಗೆ ಅದೆಷ್ಟೋ ಪೋಷಕರು ತಮ್ಮ ಮಕ್ಕಳನ್ನು ಬೈಕ್ ಹತ್ತಿಸಿ ಎಲ್ಲಿಂದ ಎಲ್ಲಿಗೋ ಪ್ರಯಾಣ ನಡೆಸುತಿದ್ದರು. ಆದ್ರೆ ಇದಕ್ಕೆಲ್ಲ ಬ್ರೇಕ್ ಎಂಬಂತೆ,ಸಣ್ಣ ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ರಸ್ತೆ ಸುರಕ್ಷತಾ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದೆ.

ಮಕ್ಕಳ ಸುರಕ್ಷತೆಯ ಮೇರೆಗೆ ಈ ಹೊಸ ನಿಯಮ ಜಾರಿಯಾಗಿದೆ. ಇದರ ಪ್ರಕಾರ, 4 ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಬೈಕ್ ನ ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರು ಗಂಟೆಗೆ 40 ಕಿ.ಮೀ. ಮೀರಬಾರದು.

9 ತಿಂಗಳಿನಿಂದ 4 ವರ್ಷದೊಳಗಿನ ಮಕ್ಕಳಿಗೆ ಕ್ರ್ಯಾಶ್ ಹೆಲ್ಮೆಟ್ ತೊಡಿಸಿದ ಬಳಿಕ ಬೈಕ್ ನಲ್ಲಿ ಪ್ರಯಾಣಿಸಬೇಕು ಎಂದು ಹೇಳಲಾಗಿದೆ.ಇನ್ನೂ ಹಿಂಬದಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವುದಾದರೆ, ಬೈಕ್ ಸವಾರನನ್ನು ಕೂಡಿಸುವಂತೆ ಸುರಕ್ಷತಾ ಪಟ್ಟಿಯನ್ನು ಒದಗಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.