Home News New Rules : ಬೈಕ್, ಸ್ಕೂಟರ್ ಹೊಂದಿರುವವರಿಗೆ ಹೊಸ ರೂಲ್ಸ್ – ಜ. 1ರಿಂದ ABS...

New Rules : ಬೈಕ್, ಸ್ಕೂಟರ್ ಹೊಂದಿರುವವರಿಗೆ ಹೊಸ ರೂಲ್ಸ್ – ಜ. 1ರಿಂದ ABS ಬ್ರೇಕ್, 2 ಹೆಲ್ಮೆಟ್ ಕಡ್ಡಾಯ

Hindu neighbor gifts plot of land

Hindu neighbour gifts land to Muslim journalist

New Rules : ಬೈಕ್ ಮತ್ತು ಸ್ಕೂಟರ್ ಹೊಂದಿರುವವರಿಗೆ ಸರ್ಕಾರವು ಜನವರಿ ಒಂದರಿಂದ ಹೊಸ ರೂಲ್ಸ್ ಅನ್ನು ಜಾರಿಗೊಳಿಸುತ್ತಿದ್ದು ತಮ್ಮ ವಾಹನಗಳಿಗೆ ಎಬಿಎಸ್ ಬ್ರೇಕ್ ಮತ್ತು ಎರಡು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ಹೌದು, ಇದುವರೆಗೆ 125 ಸಿಸಿ ಮೇಲ್ಪಟ್ಟ ಬೈಕ್‌ ಹಾಗೂ ಸ್ಕೂಟರ್ ಎಲ್ಲಾ ಬೈಕ್‌ಗೆ ಎಬಿಎಸ್ ಕಡ್ಡಾಯ ಮಾಡಲಾಗಿತ್ತು. 125 ಸಿಸಿ ಒಳಗಿನ ಬೈಕ್ ಕಾಂಬಿ ಬ್ರೇಕ್ ಸಿಸ್ಟಮ್ ಕಡ್ಡಾಯ ಮಾಡಲಾಗಿತ್ತು. ಆದರೆ ಸುರಕ್ಷತಾ ದೃಷ್ಟಿಯಿಂದ 2026ರ ಜನವರಿ 1ರಿಂದ ಎಷ್ಟೇ ಸಿಸಿ, ಯಾವುದೇ ಬೈಕ್ ಅಥವಾ ಸ್ಕೂಟರ್ ಇರಲಿ ಎಬಿಎಸ್ ಬ್ರೇಕ್ ಕಡ್ಡಾಯ ಮಾಡಲಾಗಿದೆ. 

ಇನ್ನು 2026ರ ಜನವರಿ 1 ರಿಂದ ನೀವು ಬೈಕ್ ಅಥವಾ ಸ್ಕೂಟರ್ ಖರೀದಿಸುವಾಗ 2 ಹೆಲ್ಮೆಟ್ ಕಡ್ಡಾಯವಾಗಿ ಖರೀದಿಸಬೇಕು. ಇದನ್ನು ಡೀಲರ್ ಅಥವಾ ಶೋ ರೂಂ ಉಚಿತವಾಗಿ ನೀಡಬಹುದು, ಅಥವಾ ಗ್ರಾಹಕರು ಖರೀದಿಸಬಹುದು. ಒಟ್ಟು ಬೈಕ್ ಖರೀದಿಸುವಾಗ 2 ಹೆಲ್ಮೆಟ್ ಕಡ್ಡಾಯವಾಗಿ ಇರಲೇಬೇಕು.

2026ರಿಂದ ಭಾರತೀಯ ಗುಣಮಟ್ಟ ಮಾನದಂಡ (ಬಿಐಎಸ್) ಹೊಂದಿರುವ ಹೆಲ್ಮೆಟ್ ಕಡ್ಡಾಯವಾಗಿದೆ. 2026ರಿಂದ ಮಾರಾಟವಾಗುವ ಹೊಸ ಹೆಲ್ಮೆಟ್ ಬಿಐಎಸ್ ಮಾನದಂಡ ಹೊಂದಿರಬೇಕು. ಇದು ಕಡ್ಡಾಯ ಮಾಡಲಾಗಿದೆ.