Home News OTT Player: ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ಪ್ಲಾಟ್ ಫಾರ್ಮ್

OTT Player: ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ಪ್ಲಾಟ್ ಫಾರ್ಮ್

OTT releases

Hindu neighbor gifts plot of land

Hindu neighbour gifts land to Muslim journalist

OTT Player: ಒಟಿಟಿಗಳು ಕನ್ನಡ ಸಿನಿಮಾಗಳನ್ನು ಖರೀದಿ ಮಾಡುತ್ತಿಲ್ಲ ಎಂಬ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಹಿನ್ನಲೆ ಕನ್ನಡ ಸಿನಿಮಾಗಳಿಗಾಗಿ ಪ್ರತ್ಯೇಕ ಒಟಿಟಿ ವೇದಿಕೆ ನಿರ್ಮಿಸುವ ಪ್ರಯತ್ನಗಳೂ ಸಹ ನಡೆದಿವೆ. ಇದರ ನಡುವೆ ಈಗ ನಿರ್ಮಾಣ ಸಂಸ್ಥೆಯೊಂದು ‘ಒಟಿಟಿ ಪ್ಲೇಯರ್’ (OTT Player) ಅನ್ನು ಬಿಡುಗಡೆ ಮಾಡಿದೆ.

ವಾಸ್ತವದಲ್ಲಿ ಒಟಿಟಿಗಳಿಗೆ ಹೆಚ್ಚು ಸಬ್​ಸ್ಕ್ರೈಬರ್​ಗಳು ಇರುವುದು ಕರ್ನಾಟಕದಲ್ಲಿಯೇ ಆದರೆ ಅವರು ಕನ್ನಡ ಸಿನಿಮಾಗಳನ್ನು ಮಾತ್ರ ಖರೀದಿ ಮಾಡಿ ಪ್ರದರ್ಶನ ಮಾಡುವುದಿಲ್ಲ. ಈ ಹಿನ್ನಲೆ ಕನ್ನಡಿಗರಿಗೆ ಕನ್ನಡದ್ದೇ ಆದ ಒಟಿಟಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಅದಕ್ಕಾಗಿ ಇದೀಗ ಕನ್ನಡದ್ದೇ ಆದ ಹೊಸ ಒಟಿಟಿ ವೇದಿಕೆಯೊಂದು ಬಿಡುಗಡೆ ಆಗಿದೆ.

ಹೌದು, ‘ಒಟಿಟಿ ಪ್ಲೇಯರ್’ ಹೆಸರಿನ ಹೊಸ ಒಟಿಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಆಪ್​ ಮಾದರಿಯ ಒಟಿಟಿ ಅಲ್ಲ, ಬದಲಿಗೆ ವೆಬ್​ಸೈಟ್ ಆಗಿದೆ. ಅತ್ಯಂತ ಕಡಿಮೆ ಮೊತ್ತದಲ್ಲಿ ವೆಬ್​ಸೈಟ್​ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆ ಅಡಿಯಲ್ಲಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಈ ವೆಬ್ ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

‘ಒಟಿಟಿ ಪ್ಲೇಯರ್’ ಬಗ್ಗೆ ಮಾತನಾಡಿದ ಮುರಳಿರಾವ್ ಇದೊಂದು ಹೊಸ ಪ್ರಯತ್ನ. ನಮ್ಮ ವೆಬ್ ಸೈಟ್ ಗೆ ಲಾಗಿನ್​ ಆಗಿ ಅಲ್ಪದರ ಪಾವತಿಸಿ ಹೊಸ ಚಿತ್ರಗಳನ್ನು ನೋಡಬಹುದು. ಇದನ್ನು ಆನ್ ಲೈನ್ ಥೇಟರ್ ಅನ್ನಬಹುದು‌. ಅಲ್ಲದೆ ಉತ್ತಮ ಕಿರು ಚಿತ್ರಗಳನ್ನು ಕೂಡ ನಮ್ಮ ವೆಬ್ ಸೈಟ್ ಬಿಡುಗಡೆ ಮಾಡುತ್ತೇವೆ’ ಎಂದು ವಿವರಿಸಿದರು.

ಒಟಿಟಿ ಪ್ಲೇಯರ್​ನಲ್ಲಿ ಕೆಲ ಕನ್ನಡ ಸಿನಿಮಾಗಳು, ಕನ್ನಡ ಕಿರುಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಕೆಲವು ಇಂಗ್ಲೀಷ್ ಸಿನಿಮಾಗಳನ್ನೂ ಸಹ ಪ್ರದರ್ಶಿಸಲಾಗುತ್ತಿದೆ. ಹಲವು ಸಿನಿಮಾಗಳ ಶೀಘ್ರವೇ ಬರಲಿವೆ ಎಂದು ಜಾಹೀರಾತು ಹಾಕಲಾಗಿದೆ.