Home News NEET: ನೀಟ್ ನಕಲಿ ಅಂಕಪಟ್ಟಿ ಹಗರಣ ಬಯಲು!

NEET: ನೀಟ್ ನಕಲಿ ಅಂಕಪಟ್ಟಿ ಹಗರಣ ಬಯಲು!

Hindu neighbor gifts plot of land

Hindu neighbour gifts land to Muslim journalist

NEET: ವಿದ್ಯಾರ್ಥಿಯೋರ್ವನಿಂದ ಸಾವಿರಾರು ರೂ. ಹಣ ಪಡೆದು ಆನ್‌ಲೈನ್ ಮೂಲಕ ನಕಲಿ ನೀಟ್ (NEET) ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ನಿವಾಸಿ ಡಾ.ರೋಶನ್ ಶೆಟ್ಟಿ ಮಗ ರೊನಾಕ್ ಆರ್.ಶೆಟ್ಟಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ಇತ್ತೀಚೆಗೆ ಎನ್.ಟಿ.ಎ. ನಡೆಸಿದ ನೀಟ್ ಪರೀಕ್ಷೆ ಬರೆದಿದ್ದ.

ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಎಡಿಟಿಂಗ್ ಮಾಸ್ಟರ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ರಾಷ್ಟ್ರೀಯ ಮಟ್ಟದ ನೀಟ್, ಜೆಇಇ ಮತ್ತು ಸಿಬಿಎಸ್ಇ ಪರೀಕ್ಷೆಗಳ ಫಲಿತಾಂಶಗಳನ್ನು ಡಿಜಿಟಲ್ ರೂಪದಲ್ಲಿ ಬದಲಾಯಿಸುವುದು ಮತ್ತು ನಕಲಿ ಮಾಡುವುದು ಹೇಗೆ ಎಂಬ ವೀಡಿಯೊಗಳಿದ್ದವು. ವಿದ್ಯಾರ್ಥಿ ಕೂಡಲೇ ಅವರನ್ನು ಸಂಪರ್ಕಿಸಿದ್ದ.

ಆಗ ಆ ವ್ಯಕ್ತಿ ತನ್ನನ್ನು ವಿಷ್ಣುಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ನಂತರ ವಿದ್ಯಾರ್ಥಿಗೆ ನಕಲಿ ನೀಟ್ ಅಂಕ ಪಟ್ಟಿ ಹಾಗೂ ಓಎಂಆರ್ ನೀಡುವುದಾಗಿ ತಿಳಿಸಿ 17 ಸಾವಿರ ರೂ. ವರ್ಗಾಯಿಸಿಕೊಂಡು ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದ.

ಆರೋಪಿ ನಕಲಿ ದಾಖಲೆ ಸೃಷ್ಟಿಸಿ ವಿದ್ಯಾರ್ಥಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ರೋಶನ್ ಕುಮಾರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:Bangalore: ಹಸುವಿನ ಕೆಚ್ಚಲು ಕೊಯ್ದು ವಿಕೃತಿ