Home News NEET Exam: ಜುಲೈ ತಿಂಗಳಲ್ಲಿ NEET-PG ಪರೀಕ್ಷೆ; 2 ಗಂಟೆ ಮುಂಚೆ ಸಿದ್ಧಗೊಳ್ಳಲಿದೆ ಪ್ರಶ್ನೆ ಪತ್ರಿಕೆ!

NEET Exam: ಜುಲೈ ತಿಂಗಳಲ್ಲಿ NEET-PG ಪರೀಕ್ಷೆ; 2 ಗಂಟೆ ಮುಂಚೆ ಸಿದ್ಧಗೊಳ್ಳಲಿದೆ ಪ್ರಶ್ನೆ ಪತ್ರಿಕೆ!

NEET Exam

Hindu neighbor gifts plot of land

Hindu neighbour gifts land to Muslim journalist

NEET Exam: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪಡೆಯುವುದಕ್ಕೆ ನಡೆಯಲಿರುವ ನೀಟ್ -ಪಿಜಿ ಪರೀಕ್ಷೆ ಜುಲೈ ತಿಂಗಳಲ್ಲಿ 25 ರಿಂದ ಜುಲೈ 27 ರವರೆಗೆ ನಡೆಯಲಿದ್ದು, ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ತಡೆಗಟ್ಟುವುದಕ್ಕಾಗಿ ಪರೀಕ್ಷೆ ನಡೆಯುವುದಕ್ಕೂ 2 ಗಂಟೆಗಳ ಮುನ್ನ ಪ್ರಶ್ನೆ ಪರೀಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

Mangaluru: ಸುಪಾರಿ ನೀಡಿ ಪತಿ ಹತ್ಯೆ ಪ್ರಕರಣ; ಪತ್ನಿ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

ಹೌದು, ಈಗಾಗಲೇ ಜೂನ್ 23 ಕ್ಕೆ ನಿಗದಿಯಾಗಿದ್ದ NEET-PG ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆ (NEET Exam) ಆರಂಭದ ಕೆಲವು ಗಂಟೆ ಮುಂಚೆ ಪರೀಕ್ಷೆ ರದ್ದು ಮಾಡಲಾಗಿತ್ತು. ಇದರಿಂದ ಹಲವು ರೀತಿಯ ಪ್ರತಿಭಟನೆ ನಡೆದಿದ್ದು, ನಂತರ ನೀಟ್‌-ಪಿಜಿ ಪರೀಕ್ಷೆಯ ದಿಢೀರ್‌ ರದ್ದು ಮಾಡಿದ್ದರಿಂದ ತೊಂದರೆಯಾಗಿರುವ ಬಗ್ಗೆ, ವಿದ್ಯಾರ್ಥಿಗಳ ಹಿತರಕ್ಷಣೆಯ ದೃಷ್ಟಿಯಿಂದಲೇ ಪರೀಕ್ಷೆ ರದ್ದು ಮಾಡಲಾಗಿತ್ತು ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

ಇದೀಗ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ NEET-PG ಪರೀಕ್ಷೆಯು ಜುಲೈ ತಿಂಗಳಲ್ಲಿ ನಡೆಯಲಿದೆ ಎಂದು ಗೃಹ ಸಚಿವಾಲಯವು ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮ ಮೂಲಗಳಿಗೆ ತಿಳಿಸಿವೆ. ಕಳೆದ ತಿಂಗಳ ನೀಟ್‌-ಪಿಜಿ ಪರೀಕ್ಷೆಯ ದಿಢೀರ್‌ ರದ್ದು ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಆದ್ದರಿಂದ ಗವರ್ನಮೆಂಟ್ ಸೈಬರ್ ಕ್ರೈಮ್ ಬ್ರಾಂಚ್ ಪ್ರಶ್ನೆ ಪತ್ರಿಕೆಯನ್ನು ಎರಡು ಗಂಟೆ ಮುಂಚಿತವಾಗಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿವೆ. ಈ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ NEET-PG ಯ ಪರೀಕ್ಷೆ ಸಂಪೂರ್ಣ ಮೌಲ್ಯಯುತವಾಗಿ ಕೈಗೊಳ್ಳುತ್ತದೆ ಮತ್ತು ಈ ನಿರ್ಧಾರವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಪರಿಣಾಮ ಈಗಾಗಲೇ NEET-PG ಮತ್ತು NEET-UG ಎರಡೂ ಪರೀಕ್ಷೆಗಳನ್ನು ನಡೆಸುವ ಏಜೆನ್ಸಿ, ಮತ್ತು ಅದರ ಮುಖ್ಯಸ್ಥ ಎಸ್‌ಕೆ ಸಿಂಗ್ ಅವರನ್ನು ವಜಾಗೊಳಿಸಲಾಗಿದೆ. ಜೊತೆಗೆ ಕಳೆದ ವಾರ ಫೆಡರಲ್ ಏಜೆನ್ಸಿ ಗುಜರಾತ್‌ನ ಏಳು ಸ್ಥಳಗಳ ಮೇಲೆ ದಾಳಿ ನಡೆಸಿತು ಮತ್ತು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಶಾಲೆಯೊಂದರ ಪ್ರಾಂಶುಪಾಲರನ್ನು ಮತ್ತು ಸ್ಥಳೀಯ ಹಿಂದಿ ಪತ್ರಿಕೆಯ ಪತ್ರಕರ್ತರನ್ನು ಕೂಡ ಬಂಧಿಸಿದೆ. ಒಟ್ಟಾರೆಯಾಗಿ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಸದ್ಯ ಸಿಬಿಐ ತನ್ನ ತನಿಖೆಯನ್ನು ಅಂತಾರಾಜ್ಯಗಳಿಗೆ ವಿಸ್ತರಿಸಿದ್ದು, ಪ್ರಶ್ನೆ ಪತ್ರಿಕೆ ಹಗರಣಕ್ಕೆ ಸಂಬಂಧ ಪಟ್ಟವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ.

Murder Case: ಮಲಯಾಳಿ ಅಬ್ದುಲ್ ರಹೀಮ್ ಮರಣದಂಡನೆ ರದ್ದು: ಸೌದಿ ಅರೇಬಿಯಾದ ರಿಯಾದ್ ಕೋರ್ಟ್ ಆದೇಶ